Site icon PowerTV

ಸನಾತನ ಧರ್ಮವನ್ನು ತೊಡೆದು ಹಾಕುವ ಅಗತ್ಯವಿದೆ : ಉದಯನಿಧಿ ಸ್ಟಾಲಿನ್​ ಪುನರುಚ್ಚರಣೆ !

ತಮಿಳುನಾಡು: ಹುಟ್ಟಿನಿಂದ ಎಲ್ಲರೂ ಸಮಾನರು ಈ ನಿಟ್ಟಿನಲ್ಲಿ ನಾವು ಸನಾತನ ಧರ್ಮವನ್ನು ತೊಡೆದು ಹಾಕುವ ಅಗತ್ಯವಿದೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಪುನರುಚ್ಚರಿಸಿದ್ದಾರೆ.

ತಮಿಳುನಾಡಿನಲ್ಲಿ ಇಂದಿಗೂ ಜಾತಿ ಹಾಗೂ ಸಾಮಾಜಿಕ ತಾರತಮ್ಯ ಜನರನ್ನು ಕಾಡುತ್ತಿದೆ. ಇದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ರಾಜ್ಯಪಾಲ ಆರ್​​.ಎನ್​. ರವಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನನಗೂ ಚೈತ್ರ ಕುಂದಾಪುರ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ : ಚಕ್ರವರ್ತಿ ಸೂಲಿಬೆಲೆ

ರಾಜ್ಯಪಾಲ ಆರ್.ಎನ್​. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಉದಯನಿಧಿ, ಅವರು ಹೇಳುವುದನ್ನೇ ನಾವು ಹೇಳುತ್ತಿದ್ದೇವೆ. ಅದಕ್ಕಾಗಿ ನಾವು ಸನಾತನ ಧರ್ಮವನ್ನು ತೊಡೆದು ಹಾಕಬೇಕಿದೆ. ಎಲ್ಲರೂ ಹುಟ್ಟಿನಿಂದ ಸಮಾನರು ಆದ ಕಾರಣಕ್ಕಾಗಿ ನಾವು ಜಾತಿ ತಾರತಮ್ಯದ ವಿರುದ್ಧ ನಮ್ಮ ಧ್ವನಿ ಎತ್ತುತ್ತಿದ್ದೇವೆ ಎಂದು ರಾಜ್ಯಪಾಲ ಆರ್.ಎನ್. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಸನಾತನ ಧರ್ಮವನ್ನು ನಾವು ತೊಡೆದು ಹಾಕಬೇಕಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದದ ಬಿರುಗಾಳಿ ಎಬ್ಬಿಸಿರುವ ಸಚಿವ ಉದಯನಿಧಿ ಈ ಹಿಂದೆ ತಾವು ನೀಡಿದ ಹೇಳಿಕೆಗೆ ಬದ್ದವಾಗಿರುವುದಾಗಿ ಪುನರುಚ್ಚರಿಸಿದ್ದಾರೆ.

Exit mobile version