Site icon PowerTV

ವಂಚನೆ ಪ್ರಕರಣ: ಅಭಿನವ ಹಾಲಶ್ರೀ ಬಂಧನ!​

ಬೆಂಗಳೂರು : ಉದ್ಯಮಿಯೊಬ್ಬರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ಕೊಡಿಸುವುದಾಗಿ ಕೋಟ್ಯಾಂತರ ರೂ ಹಣ ಪಡೆದು ವಂಚನೆ ಮಾಡಿದ್ದ ಪ್ರಕರಣದಲ್ಲಿ ಬಂಧನವಾಗಿರುವ​​ ಚೈತ್ರಾ ಕುಂದಾಪುರ ಗ್ಯಾಂಗ್‍ನ ಎ3 ಆರೋಪಿ ಅಭಿನವ ಹಾಲಶ್ರೀಯನ್ನು ಸಿಸಿಬಿ ಒಡಿಸ್ಸಾದ ಕಟಕ್​ನಲ್ಲಿ ಬಂಧಿಸಿದ್ದಾರೆ.

ಉದ್ಯಮಿ ಗೋವಿಂದಾ ಬಾಬು ಪೂಜಾರಿಗೆ ಎಂಎಲ್​ಎ ಟಿಕೆಟ್​ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ವಿಜಯನಗರದ ಹಾಲಶ್ರೀ  ಮೂರನೇ ಆರೋಪಿಯಾಗಿದ್ದು, ಪ್ರಕರಣದಲ್ಲಿ ಒಂದೂವರೆ ಕೋಟಿ ರೂಪಾಯಿ ಪಡೆದ ಆರೋಪ ಹಾಲಶ್ರೀ ಮೇಲಿದೆ. ಈ ಸ್ವಾಮೀ ಸಹ ಗೋವಿಂದ್​ ಪೂಜಾರಿ ಅವರಿಗೆ ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಸ್ಕೂಟರ್​ ನಲ್ಲಿ ಹಾವು ಪ್ರತ್ಯಕ್ಷ !

ಸಿಸಿಬಿ ಕಣ್ತಪ್ಪಿಸಿ ಹಾಲಶ್ರೀ ಸ್ವಾಮೀಜಿ ದಿನಕ್ಕೊಂದು ಸ್ಥಳವನ್ನು ಬದಲಾಯಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಮೊದಲು ಸ್ವಾಮಿಜಿಯ ಕಾರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು ಎಂದು ತಿಳಿದು ಬಂದಿದೆ. ಸದ್ಯ ಸಿಸಿಬಿ ಪೊಲೀಸರು ಸ್ವಾಮಿಜಿಯನ್ನು ವಶಕ್ಕೆ ಪಡೆದುಕೊಂಡಿದ್ದು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ.

Exit mobile version