Site icon PowerTV

ಕಾರು ಮತ್ತು ಆಟೋ ನಡುವೆ ಡಿಕ್ಕಿ ; ಹಳ್ಳಕ್ಕೆ ಬಿದ್ದ ಕಾರು

ಮಂಡ್ಯ : ಕಾರು ಮತ್ತು ಆಟೋ ನಡುವೆ ಡಿಕ್ಕಿ ಹೊಡೆದ ಹಿನ್ನೆಲೆ ಪಕ್ಕದಲ್ಲಿದ್ದ ಕಾರು ಹಳ್ಳಕ್ಕೆ ಉರುಳಿರುವ ಘಟನೆ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿ ಸಮೀಪದ ಗುಡಿಗೆರೆ ಗೇಟ್ ಬಳಿ ನಡೆದಿದೆ.

ಬೆಂಗಳೂರಿನಿಂದ ಶಿವನಸಮುದ್ರಕ್ಕೆ ಆಟೋವೊಂದು ತೆರಳುತ್ತಿದ್ದ ವೇಳೆ ಆಟೋಗೆ ಕಾರುವೊಂದು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಪಕ್ಕದ ಹಳ್ಳಕ್ಕೆ ಕಾರು ಉರುಳಿ ಬಿದ್ದಿದೆ. ಈ ಹಿನ್ನೆಲೆ ಕಾರು ಮತ್ತು ಆಟೋದಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಇದನ್ನು ಓದಿ : ಇತಿಹಾಸದ ಪುಟ ಸೇರಿದ ಹಳೇ ಸಂಸತ್ ಭವನ!

ಸದ್ಯ ಗಾಯಳುಗಳನ್ನು ಕೆ.ಎಂ. ದೊಡ್ಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕೆ.ಎಂ ದೊಡ್ಡಿ ಪೋಲಿಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.

Exit mobile version