Site icon PowerTV

ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ ಕ್ಯಾನ್ಸರ್ ಅಪರೇಷನ್…!

ಬೆಂಗಳೂರು : ಕ್ಯಾನ್ಸರ್​ನಿಂದ ಬಳಲುತ್ತಿದ್ದ 35 ವರ್ಷದ ರೋಗಿಯನ್ನು ಸಾವಿನ ದವಡೆಯಿಂದ ಪಾರು ಮಾಡಿರುವ ಡಾ. ರಾಘವೇಂದ್ರ ಬಾಬು ವೈದ್ಯರು.

ವಿವೇಕ್ (35) ಎಂಬುವವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದನು. ಎರಡನೇ ಹಂತದಲ್ಲಿ ಭೀಕರವಾಗಿ ವಿವೇಕ್​​ಗೆ ಕ್ಯಾನ್ಸರ್ ಟ್ಯೂಮರ್ ಹರಡಿಕೊಂಡಿತ್ತು. ಈ ಹಿನ್ನೆಲೆ ವಿವೇಕ್ ಆಸ್ಪತ್ರೆಗೆ ದಾಖಲಾಗಿದ್ದು, ಆಗಸ್ಟ್ 14 ರಂದು ಶಸ್ತ್ರ ಚಿಕಿತ್ಸೆ ನಡೆಸಿದ್ದರು.

ಇದನ್ನು ಓದಿ : ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಹಠಾತ್ ಸಾವು

ವಿವೇಕ್​ಗೆ ಕಿಡ್ನಿವರೆಗೆ ಹರಡಿದ್ದ ಟ್ಯೂಮರ್​ನನ್ನು 8 ಗಂಟೆಗಳ ಕಾಲ 4 ಜನ ವೈದ್ಯರ ತಂಡ ಅಪರೇಷನ್ ನಡೆಸಿದ್ದು, 14 ಕೆ.ಜಿ ಕ್ಯಾನ್ಸರ್ ಟ್ಯೂಮರ್​ನ್ನು ಹೊರತೆಗೆದ ವೈದ್ಯರ ತಂಡ. ಕ್ಯಾನ್ಸರ್ ತೀವ್ರತೆಯಿಂದ ಕಿಡ್ನಿಗೂ ಎಫೆಕ್ಟ್ ಆಗಿದ್ದು, ಒಂದು ಕಿಡ್ನಿ ತೆಗೆದ್ರು ವಿವೇಕ್ ಯಾವುದೇ ಅಪಾಯವಾಗುದೇ ಸೇಪ್ ಆಗಿದ್ದಾನೆ.

ಅಸಾಧ್ಯ ಎಂದಿದ್ದನ್ನ ಸಾಧ್ಯ ಎಂದು ಸಾಬೀತು ಮಾಡಿದ ವೈದ್ಯರ ಕೈಚಳಕವನ್ನು ಕಂಡು ಈಗ ಯಾವುದೇ ಅಪಾಯ ಇಲ್ಲದೇ ಆರಾಮವಾಗಿ ಇರುವ ವಿವೇಕ್, ಸಾವಿನ ದವಡೆಯಿಂದ ಪಾರು ಮಾಡಿದ ವೈದ್ಯರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾನೆ.

Exit mobile version