Site icon PowerTV

Viral Video : ಅಣ್ಣಾಮಲೈಗೆ ಕಿಸ್ ಕೊಟ್ಟ ಅಜ್ಜಿ

ಬೆಂಗಳೂರು : ಮಾಜಿ ಐಪಿಎಸ್​ ಅಧಿಕಾರಿ, ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ ಅಜ್ಜಿಯೊಬ್ಬರು ಮುತ್ತು ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಳನಿಯಲ್ಲಿ ಅಣ್ಣಾಮಲೈ ಅವರು ಎರಡನೇ ಹಂತದ ಪಾದಯಾತ್ರೆ ಕೈಗೊಳ್ಳುತ್ತಿದ್ದಾಗ ಒಬ್ಬ ಅಜ್ಜಿ ಓಡಿಬಂದು ಬಿಗಿದಪ್ಪಿಕೊಂಡರು. ಬಳಿಕ, ಅಣ್ಣಾಮಲೈಗೆ ಪ್ರೀತಿಯಿಂದ ಮುತ್ತು ಕೊಟ್ಟರು. ‘ನೀವು ಚೆನ್ನಾಗಿದ್ದೀರಾ ಸ್ವಾಮಿ’ ಎಂದೂ ಹಾರೈಸಿದ್ದಾರೆ.

ಅಜ್ಜಿಯ ಪ್ರೀತಿಗೆ ಅಣ್ಣಾಮಲೈ ಮನಸೋತರು. ‘ನಾನು ಚೆನ್ನಾಗಿದ್ದೇನೆ. ನೀವು ಚೆನ್ನಾಗಿದ್ದೀರಾ? ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಅಜ್ಜಿಗೆ ಹೇಳಿದರು. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಇನ್ನೂ ಪಾದಯಾತ್ರೆ ವೇಳೆ ದಂಪತಿಯೊಂದು ಕೈಯಲ್ಲಿ ಗಿಫ್ಟ್​ ಒಂದನ್ನು ಹಿಡಿದು ಅಣ್ಣಾಮಲೈ ಬಳಿ ಬಂದರು. ಚಪ್ಪಲಿ ತಯಾರಿಕಾ ದಂಪತಿ ಅಣ್ಣಾಮಲೈಗೆ ಚಪ್ಪಲಿಯನ್ನು ದಯಪಾಲಿಸಿದರು. ಶೂ ಧರಿಸಿ ಪಾದಯಾತ್ರೆ ಮಾಡುತ್ತಿದ್ದ ಅವರು, ಕೆಳಗೆ ಕುಳಿತು ಶೂ ಬಿಚ್ಚಿ, ಆ ದಂಪತಿ ಕೊಟ್ಟ ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡು ನಡೆದರು.

Exit mobile version