Site icon PowerTV

ಕೋಳಿ ಫಾರಂನಲ್ಲಿ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು!

ಬೆಂಗಳೂರು : ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿಯಲ್ಲಿ ನಡೆದಿದೆ.

ನೇಪಾಳ ಮೂಲದ ಕಾಲೆ ಸರೆರಾ, ಲಕ್ಷ್ಮೀ ಸರೇರಾ, ಉಷಾ ಸರೇರಾ, ಪೊಲ್ ಸರೇರಾ ಎನ್ನುವ ಒಂದೇ ಕುಟುಂಬದ ನಾಲ್ವರು ರಾತ್ರಿ ಕೋಳಿ ಫಾರಂನಲ್ಲಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ನೇಪಾಳಿ ಕುಟುಂಬ 8 ದಿನಗಳ ಹಿಂದೆಯಷ್ಟೇ ಕೆಲಸ ಅರಸಿ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿಗೆ ಬಂದಿತ್ತು.

ಇದನ್ನೂ ಓದಿ: ಜೈಲಿನಿಂದ ಪುನೀತ್​ ಕೆರೆಹಳ್ಳಿ ಬಿಡುಗಡೆ!

ಆದ್ರೆ, ನಿನ್ನೆ ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದ್ದವರು, ಇಂದು ಬೆಳಗ್ಗೆ ಸ್ಥಳೀಯರು ಹೋಗಿ ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ. ಅನುಮಾನಗೊಂಡ ಸ್ಥಳೀಯರು ಹೋಗಿ ನೋಡಿದಾಗ ನಾಲ್ವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸದ್ಯ ನಾಲ್ವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇನ್ನು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.

Exit mobile version