Site icon PowerTV

Wow.. 4.9 ಅಡಿ ಉದ್ದ ಕೂದಲು : ಗಿನ್ನೆಸ್ ದಾಖಲೆ ಬರೆದ 15ರ ಚೋರ

ಬೆಂಗಳೂರು : ಭಾರತೀಯ ಬಾಲಕನೊಬ್ಬ ಜಗತ್ತಿನಲ್ಲೇ ಅತಿ ಉದ್ದದ ಕೂದಲು ಹೊಂದಿರುವ ಬಾಲಕ ಎಂದು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾನೆ.

ಉತ್ತರ ಪ್ರದೇಶದ ಸಿದ್ಧಕ್‌ ದೀಪ್ ಸಿಂಗ್ ಚಹಾಲ್ ಎನ್ನುವ 15 ವರ್ಷದ ಬಾಲಕ ಈ ಸಾಧನೆ ಮಾಡಿದ್ದಾನೆ. ಸಿದ್ಧಕ್‌ ದೀಪ್ ಸಾಧನೆ ಕುರಿತ ವಿಡಿಯೋ ಮಾಹಿತಿಯನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಹಂಚಿಕೊಂಡಿದೆ. ಸಿದ್ಧಕ್ ದೀಪ್ ಕೂದಲು 4.9 ಅಡಿ ಉದ್ದ ಅಂದರೆ 146 ಸೆಂ.ಮೀ ಉದ್ದ ಬೆಳೆದಿದ್ದು, ಕೂದಲನ್ನು ಸುಂದರವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ನಾನು ನನ್ನ ಜೀವನದಲ್ಲಿ ಎಂದೂ ಕೂದಲನ್ನು ಕತ್ತರಿಸಲಿಲ್ಲ, ಸಿಖ್ ಧಾರ್ಮಿಕತೆಯ ಪ್ರಕಾರ ನಾನು ಕೂದಲನ್ನು ಕತ್ತರಿಸದೇ ಹಾಗೇ ಬಿಟ್ಟೆ. ಕ್ರಮೇಣ ಹೆಚ್ಚಾಗುತ್ತಾ ಹೋದರೂ ನಾನು ಕತ್ತರಿಸದಿರಲು ನಿರ್ಧರಿಸಿದೆ. ಈಗ ಅದು ವಿಶ್ವ ದಾಖಲೆಯಾಗಿರುವುದು ಸಂತೋಷ ನೀಡಿದೆ ಎಂದು ಹೇಳಿದ್ದಾರೆ.


Exit mobile version