Site icon PowerTV

3 ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಸಚಿವ ರಾಜಣ್ಣ ಹೇಳಿಕೆಗೆ ನನ್ನ ಸಹಮತವಿಲ್ಲ : ಟಿ.ಬಿ ಜಯಚಂದ್ರ

ಬೆಂಗಳೂರು : ರಾಜ್ಯದಲ್ಲಿ 3 ಡಿಸಿಎಂ ಹುದ್ದೆ ಸೃಷ್ಠಿಗಾಗಿ ಹೈಕಮಾಂಡ್​ಗೆ ಪತ್ರ ಬರೆಯುವ ವಿಚಾರ ಸಚಿವ ರಾಜಣ್ಣ ನೀಡಿರುವ ಹೇಳಿಕೆಗೆ ನನ್ನ ಸಹಮತವಿಲ್ಲ ಎಂದು ಕಾಂಗ್ರೆಸ್​ ಹಿರಿಯ ಮುಖಂಡ ಟಿಬಿ ಜಯಚಂದ್ರ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂವರು ಡಿಸಿಎಮ್​ ಹುದ್ದೆ ಸೃಷ್ಟಿ ವಿಚಾರ ಯಾವ ಹಿನ್ನೆಲೆಯಲ್ಲಿ ಹೇಳಿಕೆ ನಿಡಿದ್ದಾರೋ ಗೊತ್ತಿಲ್ಲ. ಆದರೇ, ಇದು ಸರ್ಕಾರಕ್ಕೆ ಅವರು ನೀಡುತ್ತಿರುವ ಸಲಹೆ ಇರಬಹುದು ಎಂದು ಅನಿಸುತ್ತಿದೆ.

ಇದನ್ನೂ ಓದಿ: ಜವಾನ್​​ ಭಾಗ 2ರ ಬಗ್ಗೆ ನಿರ್ದೇಶಕ ಅತ್ಲಿ ಹೇಳಿದ್ದೇನು ಗೊತ್ತಾ ?

3 ಡಿಸಿಎಂ ಹುದ್ದೆ ಸೃಷ್ಟಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ ಅದರ ಬಗ್ಗೆ ಹೆಚ್ಚು ಪ್ರಾಮುಖ್ಯತೆ ಕೊಡಬಾರದು, ಇದು ಸಾಂವಿಧಾನಿಕ ಹುದ್ದೆ ಅಲ್ಲ, ಇದರಿಂದ ಕೆಲವೊಂದು ಸೌಕರ್ಯಗಳನ್ನು ಪಡೆಯುವುದನ್ನು ಬಿಟ್ಟು ಬೆರೇನು ಸಾಧಿಸೋಕೆ ಆಗುವುದಿಲ್ಲ ಎಂದರು.

ಆಡಳಿತದಲ್ಲಿರುವ ಸರ್ಕಾರ ಮಾಡಬೇಕಾದ ಕೆಲಸಗಳು ತುಂಬಾನೆ ಇದೆ. ಗ್ಯಾರೆಂಟಿ ಯೋಜನೆಗಳ ಜಾರಿ ಕುರಿತು ಚಿಂತನೇ ಮಾಡಬೇಕು, ಗ್ಯಾರೆಂಟಿ ಜೊತೆಗೆ ಅಭಿವೃದ್ದಿ ಯೋಜನೆಗಳಿಗೆ ಆದ್ಯತೆ ನೀಡುವ ಕಡೆಗೆ ಹೆಚ್ಚು ಗಮನಹರಿಸಬೇಕು, ಪಾರ್ಲಿಮೆಂಟ್ ಚುನಾವಣೆ ಇರುವ ಸಂದರ್ಭದಲ್ಲಿ ಇಂತಹ ವಿಚಾರಗಳು ಎಲ್ಲವೂ ಪ್ರಸ್ತುತ ಇರುತ್ತದೆ. ಅದರ ಬಗ್ಗೆ ತೀರ್ಮಾನ ಮಾಡಬೇಕಾಗಿರುವುದು ಹೈಕಮಾಂಡ್​, ಈಗ ರಾಜಣ್ಣ 3 ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಹೈಕಮಾಂಡ್​ ಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ ಅದಕ್ಕೆ ನನ್ನ ಸಹಮತವಿಲ್ಲ ಎಂದು ಅವರು ಹೇಳಿದರು.

Exit mobile version