Site icon PowerTV

ವಿರಾಟ್​ ಕೋಹ್ಲಿ ಕಾಮಿಡಿ ವೀಡಿಯೋ ವೈರಲ್​!

ಶ್ರೀಲಂಕಾ : ವಿರಾಟ್ ಕೊಹ್ಲಿಗೆ ರನ್ ಗಳಿಸುವುದು ಮತ್ತು ಶತಕಗಳನ್ನು ಸಿಡಿಸುವುದು ಮಾತ್ರ ಗೊತ್ತು ಎಂದು ನೀವು ಭಾವಿಸಿದರೆ, ಅದು ತಪ್ಪು. ವಿರಾಟ್ ಕೊಹ್ಲಿ ಕೂಡ ಅದ್ಭುತ ಕಾಮಿಡಿ ಮಾಡಬಲ್ಲರು ಎಂಬುದನ್ನು ನಾವು ಈಗಾಗಲೇ ಹಲವು ಬಾರಿ ನೋಡಿದ್ದೇವೆ. ಇದೀಗ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿಯೂ ಕಿಂಗ್ ಕೊಹ್ಲಿ ಮಾಡಿರುವ ಕಾಮಿಡಿಯ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ:ಕುಕ್ಕರ್​ ಬಾಂಬ್​ ಸ್ಪೋಟ: ಕದ್ರಿ ದೇವಾಲಯವೇ ಅರಾಫತ್ ಅಲಿ ಗುರಿ

ವಾಸ್ತವವಾಗಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಸೂಪರ್ 4 ಸುತ್ತಿನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದೆ. ಆದರೆ ಪಂದ್ಯದ ವೇಳೆ ವಾಟರ್ ಬಾಯ್ ಆಗಿ ಕಾಣಿಸಿಕೊಂಡ ಕೊಹ್ಲಿ ಅಭಿಮಾನಿಗಳನ್ನು ಹುಚ್ಚೆದ್ದು ನಗುವಂತೆ ಮಾಡಿದ್ದಾರೆ.

ಇದೀಗ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಡ್ರಿಂಕ್ಸ್ ಬಾಯ್ ಆಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ವಿಚಿತ್ರ ರೀತಿಯಲ್ಲಿ ಓಡುತ್ತ ಆಟಗಾರರ ಬಳಿಗೆ ಬಂದರು. ವಿರಾಟ್‌ರ ಈ ಕಾಮಿಡಿ ಸೆನ್ಸ್ ಕಂಡು ಸಹ ಆಟಗಾರರೂ ನಗಲಾರಂಭಿಸಿದರು.

Exit mobile version