Site icon PowerTV

ಸ್ಟುಡಿಯೋ ಬೀಗ ಮುರಿದು ಕ್ಯಾಮೆರಾಗಳನ್ನು ಕದ್ದ ಐನಾತಿ ಕಳ್ಳ

ದೊಡ್ಡಬಳ್ಳಾಪುರ : ಐನಾತಿ ಕಳ್ಳನೊಬ್ಬ ಫೋಟೋ ಸ್ಟುಡಿಯೋ ಬಾಗಿಲಿನ ಬೀಗ ಮುರಿರು ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾ ದೋಚಿರುವ ದೊಡ್ಡಬಳ್ಳಾಪುರದ ಕಂಟನಕುಂಟೆ ಗ್ರಾಮದಲ್ಲಿ ನಡೆದಿದೆ.

ಸುನೀಲ್ ಎನ್ನುವವರಿಗೆ ಸೇರಿದ ಗೌರಿ ಸ್ಟುಡಿಯೋದಲ್ಲಿ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಬಾಗಿಲಿನ ಬೀಗ ಒಡೆದು ಕಳ್ಳ ಕೈಚಳಕ ಪ್ರದರ್ಶಿಸಿದ್ದದಾನೆ.

ಸ್ಟುಡಿಯೋ ಒಳನುಗ್ಗಿರುವ ಖದೀಮ, 3ಲಕ್ಷ ರೂ. ಮೌಲ್ಯದ ಎರಡು ಕ್ಯಾಮೆರಾ, 18 ಸಾವಿರ ರೂ. ಮೌಲ್ಯದ ಎರಡು ಪ್ಲಾಶ್, ಎರಡು ಪೆನ್​ಡ್ರೈವ್ ಅನ್ನು ಬ್ಯಾಗಿಗೆ ತುಂಬಿಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version