Site icon PowerTV

ವೃದ್ಧನಿಗೆ ಕೋಲಿನಿಂದ ಥಳಿಸಿದ ಪೊಲೀಸ್​​!:ವಿಡಿಯೋ ವೈರಲ್​

ಪಟಿಯಾಲ : ರೈಲು ನಿಲ್ದಾಣದ ಬಳಿ ಪೊಲೀಸ್ ಸಿಬ್ಬಂದಿಯೊಬ್ಬರು ವೃದ್ಧನೊಬ್ಬನನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಆರೋಪಿಯನ್ನು ಪಟಿಯಾಲದ ಅನಾಜ್ ಮಂಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಮ್ ಲಾಲ್ ಎಂದು ಗುರುತಿಸಲಾಗಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಪೊಲೀಸನೊಬ್ಬ ವಯಸ್ಸಾದ ಸಿಖ್ ವ್ಯಕ್ತಿಯ ಕಾಲುಗಳ ಮೇಲೆ ಕೋಲಿನಿಂದ ಹೊಡೆಯುವುದನ್ನು ಕಾಣಬಹುದು.

ಇದನ್ನೂ ಓದಿ: ಸರಳ ದಸರಾ ಆಚರಣೆಗೆ ಒತ್ತು!: ಅನಗತ್ಯ ಖರ್ಚಿಗೆ ಕಡಿವಾಣ : ಸಚಿವ ಮಹದೇವಪ್ಪ

ಅಲ್ಲಿಯೇ ಇದ್ದ ಕೆಲ ಜನರು ವೃದ್ಧನ ರಕ್ಷಣೆಗೆ ಬರುತ್ತಾರೆ. ವೃದ್ಧನನ್ನು ರಾಜ್‌ಗಢ ಗ್ರಾಮದ ಬಲವೀರ್ ಸಿಂಗ್ ಎಂದು ಗುರುತಿಸಲಾಗಿದೆ. ಬಲವೀರ್ ಸಿಂಗ್ ಜನರಿಗೆ ಕುಡಿಯುವ ನೀರನ್ನು ತುಂಬಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಪೊಲೀಸ್ ಸಿಬ್ಬಂದಿ ನನಗೆ ಹೊಡೆದಿದ್ದಾರೆಂದು ಬಲವೀರ್ ಸಿಂಗ್ ತಿಳಿಸಿದ್ದಾರೆ. ಆತ ನನಗೆ ಹಣ ಕೇಳಿದನು. ನಾನು ಕೊಡಲಿಲ್ಲ ಆದ್ದರಿಂದ ಆತ ನನಗೆ ಹೊಡೆದನು. ಕಾಲು ಮತ್ತು ಕೈಗಳಿಗೆ ಗಾಯಗಳಾಗಿವೆ ಎಂದು ಬಲವೀರ್ ಸಿಂಗ್ ತಿಳಿಸಿದ್ದಾರೆ.

ಈ ವಿಡಿಯೋವನ್ನು ಪಟಿಯಾಲ ಎಎಸ್​ಪಿ ಗಮನಿಸಿದ್ದು, ಆರೋಪಿಯನ್ನ ಅಮಾನತು ಮಾಡಿದ್ದೇವೆಂದು ತಿಳಿಸಿದ್ದಾರೆ.

Exit mobile version