Site icon PowerTV

ಮಹಿಳಾ ಪಿಎಸ್ಐ ಪುತ್ರನ ಪುಂಡಾಟಕ್ಕೆ‌ ಅಮಾಯಕ ಬಲಿ

ಮೈಸೂರು : ಮಹಿಳಾ ಪಿಎಸ್ಐ ಪುತ್ರನ ಪುಂಡಾಟಕ್ಕೆ ಅಮಾಯಕ ಬಲಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ ನಡೆದಿದೆ.

ಗುರುಸ್ವಾಮಿ (68) ಮೃತ ವೃದ್ಧ. ಎಂಬುವರು ಹಸು ಮೇಯಿಸಿಕೊಂಡು ಮನೆಗೆ ತೆರಳುತ್ತಿದ್ದನು. ಈ ವೇಳೆ ಪಿಎಸ್ಐ ಯಾಸ್ಮಿನ್ ತಾಜ್ ಎಂಬುವರ ಪುತ್ರ ಸೈಯದ್ ಐಮಾನ್ ಎಂಬ ಯುವಕ ವೀಲಿಂಗ್ ಮಾಡಿಕೊಂಡು ಬಂದು ವೃದ್ಧನಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಸಾವನ್ನಪ್ಪಿದ್ದಾನೆ.

ಯಾಸ್ಮಿನ್ ತಾಜ್ ನಂಜನಗೂಡು ಸಂಚಾರಿ ಪೋಲಿಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕೂಡ ವೀಲಿಂಗ್ ವಿಚಾರಕ್ಕೆ ಯುವಕನನ್ನು ವಶಕ್ಕೆ ಪಡೆದು ದಂಡ ಹಾಕಲಾಗಿತ್ತು. ಇದಷ್ಟೆ ಅಲ್ಲದೆ ಈತನ ವಿರುದ್ಧ ಕಳ್ಳತನ ಆರೋಪ ಕೂಡ ಇತ್ತು.

ಇದನ್ನು ಓದಿ : ನನ್ನ ಕಣ್ಣಲ್ಲೂ ಸ್ಮಾರ್ಟ್ ಕಾಣುತ್ತಿಲ್ಲ ; ಸಚಿವ ಮಧು ಬಂಗಾರಪ್ಪ

ಇದರ ಬೆನ್ನಲ್ಲೇ ಮತ್ತೆ ಅದೇ ತಪ್ಪನ್ನು ಮಾಡಿ ಅಮಾಯಕ ವೃದ್ಧನ ಪ್ರಾಣ ಕಳೆದಿದ್ದಾನೆ. ಸದ್ಯ ಆರೋಪಿ ಸೈಯದ್ ಐಮಾನ್​ಗೆ ಸಣ್ಣಪುಟ್ಟ ಗಾಯಾಗಳಾಗಿದ್ದು, ಮೃತ ವೃದ್ಧನ ಕುಟುಂಬಸ್ಥರಿಂದಲೆ‌ ರಕ್ಷಣೆ ಮಾಡಿ ಚಿಕಿತ್ಸೆಗೆ ಕರೆತಂದ ಕುಟುಂಬಸ್ಥರು. ಬಳಿಕ ಗುರುಸ್ವಾಮಿಗೆ ಆಗಿರುವ ಅನ್ಯಾಯಕ್ಕೆ ನಮಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ ಕುಟುಂಬಸ್ಥರು.

Exit mobile version