Site icon PowerTV

ಜ್ಯೂಸ್​ನಲ್ಲಿ ಮತ್ತು ಬರುವ ಔಷಧಿ ಹಾಕಿ ಚಿನ್ನ ದೋಚುತ್ತಿದ್ದ ಕಳ್ಳಿ ಅಂದರ್

ಚಾಮರಾಜನಗರ : ಬಸ್ ನಿಲ್ದಾಣದಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಬೆಲೆಬಾಳುವ ಚಿನ್ನ, ಹಣ ಎಗರಿಸುತ್ತಿದ್ದ ಖಾತರ್ನಾಕ್ ಕಳ್ಳಿಯನ್ನು ಕೊಳ್ಳೆಗಾಲ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುಪುರ ಮೂಲದ ಸೆಲ್ವಿ(60) ಬಂಧಿತ ಆರೋಪಿ. ಈಕೆಯಿಂದ 57 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ಕಳೆದ ತಿಂಗಳು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ವಡಗೆರೆ ಗ್ರಾಮದ ಮಹಿಳೆಯಿಂದ ಚಿನ್ನದ ಸರ ಎಗರಿಸಿದ್ದಳು. ಮಹಿಳೆಯನ್ನು ಪರಿಚಯ ಮಾಡಿಕೊಂಡು ಜ್ಯೂಸ್​ನಲ್ಲಿ ಔಷಧಿ ಕುಡಿಸಿ ಪ್ರಜ್ಞೆ ತಪ್ಪಿಸಿ, ಚಿನ್ನದ ಸರವನ್ನು ಎಗರಿಸಿ ನಾಪತ್ತೆಯಾಗಿದ್ದಳು. ಕಿರುಗಾವಲು ಗ್ರಾಮದ ಮಹಿಳೆಯೊಬ್ಬಳು ಬಸ್ಸು ಹತ್ತುವಾಗ ಕತ್ತಿನಿಂದ ಚಿನ್ನ ಎಗರಿಸಿ ಪರಾರಿಯಾಗಿದ್ದಳು.

ಈ ಎರಡು ಸರಗಳ್ಳತನ ಪ್ರಕರಣಗಳು ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅನುಮಾನಸ್ಪಾದವಾಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಂದ ಸರ ಎಗರಿಸಲು ಹೊಂಚು ಹಾಕುತ್ತಿದ್ದಾಗ ರೆಡ್​ ಹ್ಯಾಂಡ್​ ಆಗಿ ಪೊಲೀಸರು ಬಂಧಿಸಿದ್ದಾರೆ. ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಎರಡು ಪ್ರಕರಣಗಳನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

Exit mobile version