Site icon PowerTV

ಕಾಫಿನಾಡಲ್ಲಿ ವೈದ್ಯನ ಮೇಲೆ ಹಲ್ಲೆ; ದಿನೇಶ್ ಗುಂಡೂರಾವ್ ಭೇಟಿ

ಹಾಸನ : ಕಾಫಿನಾಡಲ್ಲಿ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಕಿಡಿಗೇಡಿಗಳು ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಗ್ರಾಮದಲ್ಲಿ ನಡೆದಿದೆ.

ಬಾಳೆಹೊನ್ನೂರಿನ ಗಣೇಶ ಹಲ್ಲೆಗೊಳಗಾದ ವೈದ್ಯ. ಎಂಬುವವರು ತಮ್ಮ ತೋಟದ ಕಾರ್ಮಿಕರ ಜೊತೆ ಗಲಾಟೆ ನಡೆದಿದ್ದು, ಕಾರ್ಮಿಕರ ಮೇಲೆ ವೈದ್ಯ ಗಣೇಶ ಅವರು ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆ ಗಲಾಟೆ ಅತೀರೇಕಕ್ಕೆ ಹೋಗಿದ್ದು, ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದ ಹಿನ್ನೆಲೆ ಅಲ್ಲೆ ಪಕ್ಕದಲ್ಲಿದ್ದ ಇನ್ನೊಂದು ತೋಟದ ಕಾರ್ಮಿಕರು ನೋಡಿ ಆಕ್ರೋಶಗೊಂಡಿದ್ದರು.

ಇದನ್ನು ಓದಿ : ನಾಡಹಬ್ಬ ಮೈಸೂರು ದಸರಾ ವೇಳಾಪಟ್ಟಿ ಬಿಡುಗಡೆ

ಈ ವೇಳೆ ಆ ಕಾರ್ಮಿಕರು ವೈದ್ಯ ಗಣೇಶ ಅವರಿಗೆ ಚಾಕುವಿನಿಂದ ಕೈ ಹಾಗೂ ಹೊಟ್ಟೆ ಭಾಗಕ್ಕೆ ಚುಚ್ಚಿ ಹಲ್ಲೆ ಮಾಡಿದ್ದಾರೆ. ಈ ಪರಿಣಾಮ ತೀವ್ರ ಅಸ್ವಸ್ಥರಾಗಿದ್ದ ವೈದ್ಯ ಗಣೇಶ್​ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅದೃಷ್ಟವಶಾತ್ ವೈದ್ಯ ಪ್ರಾಣಪಾಯದಿಂದ ಪಾರಾಗಿದ್ದು, ಗಣೇಶ್ ಆರೋಗ್ಯವನ್ನು ವಿಚಾರಿಸಲೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಸ್ಪತ್ರೆಗೆ ಆಗಮಿಸಿದ್ದರು.

ಈ ಘಟನೆ ಹಿನ್ನೆಲೆ ಬಾಳೆಹೊನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version