Site icon PowerTV

ಆಜಾನ್, ಹಲಾಲ್​ಗಿಲ್ಲದ ನಿಬಂಧನೆ, ಚೌತಿ ಬಂದಾಗ ಯಾಕೆ? : ಯತ್ನಾಳ್ ಕಿಡಿ

ವಿಜಯಪುರ : ಗಣೇಶೋತ್ಸವದಲ್ಲಿ ಧ್ವನಿವರ್ಧಕಗಳ ಅಗತ್ಯವಿಲ್ಲ ಎಂದಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ

ಈ ಕುರಿತು ಟ್ವೀಟ್ ಮಾಡಿರುವ ಅವರು, ಇಸ್ಲಾಂ ಧರ್ಮದವರ ಆಜಾನ್, ಹಲಾಲ್​ಗಿಲ್ಲದ ನಿಬಂಧನೆ, ಹಿಂದೂಗಳ ಚೌತಿ ಬಂದಾಗ ಯಾಕೆ?ಎಂದು ಪ್ರಶ್ನೆ ಮಾಡಿದ್ದಾರೆ.

‘ಬೆಳ್ಳಂ ಬೆಳಗ್ಗೆ ಸಮುದಾಯವೊಂದು ಕರ್ಕಶವಾಗಿ ಐದು ಬಾರಿ ಲೌಡ್ ಸ್ಪೀಕರ್ ಮೂಲಕ ಕೂಗಿದಾಗ ತಮ್ಮ ಕಳಕಳಿ, ಕಾಳಜಿ, ಅರಿವು ಮೂಡಿಸುವಿಕೆ ಕಾಣ ಸಿಗಲಿಲ್ಲ. ಅವರ ಹಬ್ಬದಲ್ಲಿ ರಸ್ತೆಯಲ್ಲ ರಕ್ತ ಸಿಕ್ತವಾದಾಗ, ಆರೋಗ್ಯದ ಕಾಳಜಿ ಮೂಡಲಿಲ್ಲ ಅಲ್ಲವೇ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರಿಗಿಲ್ಲದ ನಿಬಂಧನೆ, ಚೌತಿ ಬಂದಾಗಷ್ಟೇ ಯಾಕೆ?ನಿಮ್ಮ ಜಾಗೃತಿ, ನೀತಿ, ನಿಯಮ, ನಿಬಂಧನೆಗಳು ಹಿಂದೂ ಹಬ್ಬಗಳಿಗಷ್ಟೇ.. ಇದು ಡೋಂಗಿತನದ ಪರಮಾವಧಿ. ಗಣೇಶ ನಿಮಗೆ ಒಳ್ಳೆಯ ಬುದ್ದಿಯನ್ನು ನೀಡಲಿ! ಎಂದು ಖಾರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ಮಾಲಿನ್ಯ ಮಂಡಳಿ ಹೇಳಿದ್ದೇನು?

‘ನನ್ನ (ಗಣೇಶ) ಹಬ್ಬದಲ್ಲಿ ಅಬ್ಬರದ ಧ್ವನಿವರ್ಧಕಗಳ ಅಗತ್ಯವಿಲ್ಲ. ಗಂಟೆ ನಾದದಲ್ಲಿಯೇ ನನಗೆ ಸಂತೃಪ್ತಿ ಸಿಗುತ್ತದೆ. ನನ್ನ ಮೂರ್ತಿಯನ್ನು ವಿಸರ್ಜಿಸುವ ಸಂದರ್ಭದಲ್ಲಿ ಹೂವು, ಹಣ್ಣು, ಆಹಾರ ಮತ್ತು ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ಜಲಮೂಲಗಳಿಗೆ ಹಾಕಬೇಡಿ’ ಎಂದು ಗಣೇಶನೇ ಸಂದೇಶ ನೀಡಿರುವಂತೆ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದೆ. ಇದಕ್ಕೆ ಕೆರಳಿರುವ ಶಾಸಕ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದಾರೆ.

https://x.com/BasanagoudaBJP/status/1702319785600778363?s=20

Exit mobile version