Site icon PowerTV

ವಿಘ್ನ..! ವಿದ್ಯುತ್ ವೈರ್ ತಗುಲಿ ಉರುಳಿ ಬಿದ್ದ ಗಣೇಶನ ಮೂರ್ತಿ

ರಾಯಚೂರು : ಜಿಲ್ಲೆಯಾದ್ಯಂತ ಗಣೇಶನ ಉತ್ಸವಕ್ಕಾಗಿ ಭರದಿಂದ ಸಿದ್ದತೆ ಸಾಗಿವೆ‌. ಆದರೆ, ನಗರದಲ್ಲಿ ಪ್ರತಿಷ್ಠಾಪಿಸಲು ಹೈದ್ರಬಾದಿನಿಂದ ನಗರಕ್ಕೆ ತರಲಾಗುತ್ತಿದ್ದ ಗಣೇಶನ ಮೂರ್ತಿ ಆಂದ್ರದ ನಂದಿನಿ ಗ್ರಾಮದ ಬಳಿ ಬಿದ್ದು ಭಾರಿ ಅನಾಹುತ ತಪ್ಪಿದ ಘಟನೆ ಜರುಗಿದೆ.

ನಗರದಲ್ಲಿ ಸಾಕಷ್ಟು ಕಡೆ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠೆಗಾಗಿ ಬೃಹದಕಾರದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ ಭಾರಿ ಗಾತ್ರದ ಗಣೇಶ ಮೂರ್ತಿಗಳನ್ನು ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಂದ ತರಲಾಗುತ್ತಿದೆ. ಇದೇ ನಿಟ್ಟಿನಲ್ಲಿ ಇಂದು ಹೈದರಾಬಾದ್ ನಿಂದ ನಗರಕ್ಕೆ ಬೃಹತ್ ಗಣೇಶ ಮೂರ್ತಿಯನ್ನು ತರಲಾಗುತ್ತಿತ್ತು.

ಗಣೇಶನ ಹೊತ್ತ ಲಾರಿ ನಂದಿನಿ ಗ್ರಾಮದ ಬಳಿ ಬರುತ್ತಿದ್ದ ವೇಳೆ ವಿದ್ಯುತ್ ವೈರ್​ಗೆ ತಗುಲಿ ಮೂರ್ತಿ ಉರುಳಿ ಬಿದ್ದಿದೆ. ಅದೃಷ್ಟವಷಾತ್ ಯಾರಿಗೂ ಗಾಯಗಳಾಗಿಲ್ಲ. ನಗರದ ಪ್ಲೇಟಾ ಬುರ್ಜ ಬಳಿ ಪ್ರತಿಷ್ಠಾಪಿಸಲು ಈ ಗಣೇಶ  ಮೂರ್ತಿ ತರಲಾಗುತ್ತಿತ್ತು ಎಂದು ತಿಳಿದುಬಂದಿದೆ.

Exit mobile version