Site icon PowerTV

ಖಾಸಗಿ ಬಸ್​ ಟಿಕೆಟ್​ ದರ ಏರಿಸದಂತೆ ಮಾಲೀಕರಿಗೆ ವಾರ್ನಿಂಗ್!​

ಬೆಂಗಳೂರು : ಗಣೇಶ ಚತುರ್ಥಿ ಸೇರಿ ಹಬ್ಬದ ಹಿನ್ನೆಲೆ ಖಾಸಗಿ ಬಸ್‌ ಮಾಲೀಕರು ಹಾಗೂ ಆನ್‌ಲೈನ್‌ ಟಿಕೆಟ್‌ ನೀಡುವ ವಿತರಕರಿಗೆ ಕರ್ನಾಟಕ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು, ಟಿಕೆಟ್‌ ದರವನ್ನು ಹೆಚ್ಚಿಸಿ ಪ್ರಯಾಣಿಕರಿಗೆ ತೊಂದರೇ ನೀಡಬೇಡಿ ಎಂದು ಸೂಚಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ಇತ್ತೀಚಿಗೆ ಮಾಧ್ಯಮಗಳಲ್ಲಿ ವಾರಾಂತ್ಯ, ಹಬ್ಬ ಹರಿದಿನಗಳಂದು ಪ್ರಯಾಣ ದರ ಏರಿಕೆ ಮಾಡಿರುವ ಕುರಿತು ವರದಿಯಾಗಿರುತ್ತದೆ. ಇದೇ ವಿಷಯದ ಕುರಿತು ಸಾರಿಗೆ ಇಲಾಖೆಗೆ ಸಾರ್ವಜನಿಕರಿಂದ ಹಲವು ದೂರುಗಳು ಸಹ ಬಂದಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಡಕಚೇರಿಯಲ್ಲಿ ಲಂಚಾವತಾರ: ಕ್ಯಾಮರಾ ಕಣ್ಣಲ್ಲಿ ಸೆರೆ! 

ಸದ್ಯ ಗಣೇಶ ಚತುರ್ಥಿಗೆ ಒಂದು ದಿನ ರಜೆ ಹಾಕಿದರೆ ನಾಲ್ಕು ದಿನ ರಜೆ ಸಿಗಲಿದೆ. ಶುಕ್ರವಾರ ರಾತ್ರಿಯಿಂದ ಖಾಸಗಿ ಬಸ್‌ ಟಿಕೆಟ್‌ ದರ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಗಂಗಾವತಿಗೆ 700 ರಿಂದ 800 ರೂ. ದರ ಇತ್ತು. ಶುಕ್ರವಾರ ಈ ಬಸ್‌ಗಳ ದರ 1600 ರಿಂದ 2000 ರೂ.ವರೆಗೂ ಏರಿಕೆಯಾಗಿದೆ.

Exit mobile version