Site icon PowerTV

ನೀನೇನ್ ಲಾರ್ಡಾ.. ನೀನ್ ಹೇಳ್ದಂಗೆ ಜಗತ್ತು ಕುಣಿಯಬೇಕಾ? : ಕೃಷ್ಣ ಭೈರೇಗೌಡ ಕ್ಲಾಸ್

ಧಾರವಾಡ : ನೀವೇನು ಲಾರ್ಡಾ.. ನೀವು ಹೇಳಿದ ಹಾಗೆ ಜಗತ್ತು ಕುಣಿಯಬೇಕಾ? ಎಂದು ಭೂ ದಾಖಲೆಗಳ ಸರ್ವೆ ಇಲಾಖೆ ಅಧಿಕಾರಿಗಳನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ತರಾಟೆ ತೆಗೆದುಕೊಂಡರು.

ಧಾರವಾಡ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಡಿಡಿಎಲ್‌ಆರ್ ಅಧಿಕಾರಿ ಕಾರ್ಯವೈಖರಿ ಬಗ್ಗೆ ಗರಂ ಆದರು. ಅಧಿಕಾರಿ ಮೋಹನ ಶಿವಮ್ಮನವರಗೆ ಸಚಿವರು ಕ್ಲಾಸ್ ತೆಗೆದುಕೊಂಡರು.

ಪೋಡಿ ಸರ್ವೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದರು. ಈ ವೇಳೆ ಜನರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಅಂತ ಗರಂ ಆದರು. ಸಚಿವರ ಕ್ಲಾಸ್ ಬಳಿಕವೂ ಅಧಿಕಾರಿ ತಮ್ಮದೇ ಸಮಜಾಯಿಸಿ ಹೇಳಿದರು. ಇದರಿಂದ ಸಚಿವರು ಮತ್ತಷ್ಟು ಕೆಂಡವಾದರು.

ಜನ ನಿಮ್ಮ ಮನೆ ಕಾಯಬೇಕಾ?

ನಾ ಎಷ್ಟು ಹೇಳಿದ್ರೂ ನೀವು ಒಪ್ಪೊಲ್ಲ ಬಿಡಿ.. ನೀವು ನಮ್ಮದು ಕೇಳೋದಿಲ್ಲ.. ನೀವೇನು ಲಾರ್ಡಾ.. ಬೆಳಗ್ಗೆಯಿಂದ ಹೇಳ್ತಾ ಇದ್ದೀನಿ, ನಿಮಗೆ ತಿಳಿತಾ ಇಲ್ವಾ? ಸರ್ವೆ ಇಲಾಖೆಯವರು ನಿಮ್ಮನ್ನು ನೀವು ಏನೆಂದುಕೊಂಡಿದ್ದೀರಿ? ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ. ಇರೋ ಕಾನೂನು ನಿಮ್ಮ ತಲೆಗೆ ಹೋಗೋದಿಲ್ಲ ಅಂದ್ರೆ ಹೇಗೆ? ಎಲ್ಲ ಜನ ಬಂದು ನಿಮ್ಮ ಮನೆ ಬಾಗಿಲು ಕಾಯಬೇಕಾ? ನೀವು ಹೇಳಿದ ಹಾಗೆ ಜಗತ್ತು ಕುಣಿಯಬೇಕಾ? ಎಂದು ತರಾಟೆ ತೆಗೆದುಕೊಂಡರು.

Exit mobile version