Site icon PowerTV

ಸರ್ಕಾರಿ ಭೂ ಒತ್ತುವರಿ ಕಾರ್ಯಾಚರಣೆ ವೇಳೆ ಕುಟುಂಬಸ್ಥರಿಂದ ಹೈಡ್ರಾಮಾ

ದೇವನಹಳ್ಳಿ : ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಹಿನ್ನೆಲೆ ಅರ್ಜಿದಾರರ ಮೇಲೆ ಚಪ್ಪಲಿ ಎಸೆದು ಹಲ್ಲೆ ಮಾಡಿರುವ ಕುಟುಂಬ ಘಟನೆ ತಾಲೂಕಿನ ಬಿದ್ದಲಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ವೆ 4 ರಲ್ಲಿ ಒಂದು ಎಕರೆ ಸರ್ಕಾರಿ ಜಮೀನನ್ನು ಗ್ರಾಮದ ಕಮಲಮ್ಮ ಮತ್ತು ನರಸಿಂಹಮೂರ್ತಿ ಎಂಬ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರ ಕುಟುಂಬ ಒತ್ತುವರಿ ಮಾಡಿಕೊಂಡಿದ್ದರು.  ಈ ಹಿನ್ನಲೆ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ತೆರವು ಮಾಡುವಂತೆ ಶಿವಕುಮಾರ್ ಎಂಬಾತ ಅರ್ಜಿಯನ್ನು ಹಾಕಿದ್ದರು.

ಇದನ್ನು ಓದಿ : ಮಾನ್ಸೂನ್ ಮಳೆ ವಿಫಲವಾದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು ; ಬಸರಾಜ್ ಬೊಮ್ಮಾಯಿ

ಗ್ರಾಮದ ದನಕರುಗಳಿಗೆ ಅನುಕೂಲವಾಗುವಂತೆ ಜಮೀನು ಉಳಿಸಲು ಎರಡು ವರ್ಷದಿಂದ ಶಿವಕುಮಾರ್ ಅವರು ಹೋರಾಟ ಮಾಡುತ್ತಿದ್ದರು. ಈ ಕಾರಣದಿಂದ ಜನರಿಗೆ ಅನುಕೂಲವಾಗಲಿ ಎಂದು ಹೋರಾಟ ಮಾಡಿದ್ದವನ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರ ಕುಟುಂಬ ದೌರ್ಜನ್ಯವನ್ನು ಮಾಡಿದ್ದರು. ಬಳಿಕ ಅರ್ಜಿ ಹಾಕಿದ್ದ ಹಿನ್ನಲೆ ಜಮೀನು ಒತ್ತುವರಿ ತೆರವು ಮಾಡಲು ಸರ್ಕಾರಿ ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದರು.

ಈ ವೇಳೆ ಗ್ರಾ. ಪಂ. ಸದಸ್ಯರ ಕುಟುಂಬ ಆಕ್ರೋಶಗೊಂಡಿದ್ದು, ಒತ್ತುವರಿ ತೆರವು ಮಾಡಲು ಬಂದಿದ್ದ ಅರ್ಜಿದಾರರ ಮೇಲೆ ಚಪ್ಪಲಿಯನ್ನು ಎಸೆದು ಹಲ್ಲೆ ಮಾಡಿ ಕಪಳಕ್ಕೆ ಹೊಡೆದು ದರ್ಪವನ್ನು ತೋರಿಸಿದ್ದಾರೆ. ಇದರಿಂದ ಕೋಪಿತಗೊಂಡ ಅರ್ಜಿದಾರರು ಹಲ್ಲೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಲಿಸರಿಗೆ ಆಗ್ರಹಿಸಿದ್ದಾre.

Exit mobile version