Site icon PowerTV

5 ಅಲ್ಲ.. ಚೈತ್ರಾ ಕುಂದಾಪುರ ಪಡೆದಿದ್ದು 3.5 ಕೋಟಿ : ಡಾ.ಜಿ ಪರಮೇಶ್ವರ್

ಬೆಂಗಳೂರು : ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಟೀನ್ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ನನಗೆ ಬಂದ ಮಾಹಿತಿ ಬಿಜೆಪಿಯಲ್ಲಿ ಟಿಕೆಟ್ ಕೊಡಿಸೋದಾಗಿ ಹಣ ಪಡೆದಿದ್ದಾರೆ. 3.5 ಕೋಟಿ ಹಣ ಪಡೆದಿರೋ ಕಂಪ್ಲೆಂಟ್ ಆಗಿದೆ ಎಂದು ಹೇಳಿದ್ದಾರೆ.

ವಂಚನೆ ಪ್ರಕರಣದಲ್ಲಿ ದೂರು ಪಡೆದು ವಿಚಾರಣೆ ನಡೆಯುತ್ತಿದೆ. ಮಿಕ್ಕಿದ ವಿಚಾರ ತನಿಖೆ ಬಳಿಕ ಗೊತ್ತಾಗಲಿದೆ. ಅವರ ಹೇಳಿಕೆಗಳನ್ನು ತೆಗೆದುಕೊಂಡು ಬಂಧನ ಮಾಡಲಾಗಿದೆ. ಸ್ವಾಮೀಜಿ ಇದಾರೆ ಅಂದ್ರೆ ತನಿಖೆ ಆಗುತ್ತದೆ. ಸ್ವಾಮೀಜಿ ತಪ್ಪಿದ್ರೆ ಅವರ ಬಂಧನ ಕೂಡ ಆಗುತ್ತೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಹಿಂದೂ ಪರವಾದ ಭಾಷಣ

ಇನ್ನೂ ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಪೊಲೀಸರು ಸುಮೋಟೋ ಹಾಕಿಕೊಂಡಿಲ್ಲ. ಕಂಪ್ಲೆಂಟ್ ಆಧಾರದ ಮೇಲೆ ಬಂಧನ ಆಗಿದೆ. ತಪ್ಪು ಯಾರೇ ಆಗಿದ್ರೂ ಕ್ರಮ ಆಗಲಿದೆ. ಹಿಂದೂ ಪರವಾದ ಭಾಷಣ ಮಾಡಿದ್ದಾರೆ. ಅದನ್ನು ಇದಕ್ಕೆ ಮಿಕ್ಸಪ್ ಮಾಡೋದು ಬೇಡ ಎಂದು ಹೇಳಿದ್ದಾರೆ.

Exit mobile version