Site icon PowerTV

ನನ್ನ ಮಗಳನ್ನ ಬಳಸಿಕೊಂಡು ಅವಳನ್ನ ಈ ಸ್ಥಿತಿಗೆ ತಂದಿದ್ದಾರೆ : ಚೈತ್ರಾ ಕುಂದಾಪುರ ತಾಯಿ ರೋಹಿಣಿ

ಉಡುಪಿ : ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಂಟತರ ರೂಪಾಯಿ ವಂಚನೆ ಮಾಡಿರುವ ಆರೋಪದಲ್ಲಿ ಚೈತ್ರಾ ಕುಂದಾಪುರ ಬಂಧನವಾಗಿದ್ದು, ಈ ಬಗ್ಗೆ ಆಕೆಯೆ ತಾಯಿ ರೋಹಿಣಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ನನ್ನ ಮಗಳನ್ನು ಬಳಸಿಕೊಂಡು ಅವಳನ್ನ ಈ ಸ್ಥಿತಿಗೆ ತರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತನ್ನ ಕೈಯಿಂದ ಹಣ ಹೋದರೂ ಪರವಾಗಿಲ್ಲ ಬೇರೊಬ್ಬರ ಹಣಕ್ಕೆ ಆಸೆ ಪಟ್ಟವಳಲ್ಲ ನನ್ನ ಮಗಳು ಚೈತ್ರಾ ಕುಂದಾಪುರ. ಏನೂ ಮಾಡದಿರುವ ತಪ್ಪಿಗೆ ನನ್ನ ಮಗಳು ಚೈತ್ರಾ ಗುರಿಯಾಗಿದ್ದಾಳೆ. ನಮಗೆ ಯಾವ ಚಿಂತೆಯೂ ಆಕೆ ಕೊಡಲ್ಲ, ಅವಳೇ ಎಲ್ಲ ನಿಬಾಯಿಸುತ್ತಾಳೆ ಎಂದು ಹೇಳಿದ್ದಾರೆ.

ಎಲ್ಲಾ ನೋಡಿಕೊಳ್ಳುತ್ತೇನೆ ಅಂದಿದ್ದಾಳೆ

ಮಗಳನ್ನ ವಶಕ್ಕೆ ಪಡೆದ ದಿನವೇ ಪೊಲೀಸರು ನಮಗೆ ಕರೆ ಮಾಡಿದ್ದರು. ನಿಮ್ಮ ಮಗಳು ಚೈತ್ರಾಳನ್ನ ವಶಕ್ಕೆ ಪಡೆಯುವ ಮಾಹಿತಿ ಜೊತೆಗೆ, ಮಗಳೊಂದಿಗೆ ಫೋನ್ ನಲ್ಲೇ ಮಾತನಾಡಿಸಿದ್ದಾರೆ. ಫೋನ್ ನಲ್ಲಿ ಮಾತನಾಡುತ್ತಾ ಧೈರ್ಯ ತೆಗೆದುಕೊಳ್ಳುವಂತೆ ಹೇಳಿದ್ದಳು. ನಾನು ಎಲ್ಲಾ ನೋಡಿಕೊಳ್ಳುತ್ತೇನೆ ಅಮ್ಮಾ ಅಂತ ಹೇಳಿದ್ದಾಳೆ. ಮಗಳ ಸ್ಥಿತಿ ಕಂಡು ಬಹಳ ಬೇಸರ ಆಗುತ್ತೆ ಎಂದು ಭಾವುಕರಾಗಿದ್ದಾರೆ.

Exit mobile version