Site icon PowerTV

75 ವಯಸ್ಸು ಆದ್ರೂ ಸಿದ್ದರಾಮಯ್ಯ ಸ್ಟ್ರಾಂಗು : ಸತೀಶ್ ಜಾರಕಿಹೊಳಿ

ಬೆಂಗಳೂರು : ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಮೊದಲಿನ ರೀತಿಯಲ್ಲಿ ಇಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹತ್ತು ವರ್ಷಗಳ ಹಿಂದೆ ಅವರಿಗೆ 65 ವಯಸ್ಸು ಆಗಿತ್ತು, ಈಗ 75 ಆಗಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ವಯಸ್ಸಿನಲ್ಲಿ ಬದಲಾವಣೆ ಅಷ್ಟೇ, ಅವರೇ ಈಗ ರಾಜ್ಯದ ಪ್ರವಾಸ ಮಾಡ್ತಾರೆ. ಪಕ್ಷದಲ್ಲಿ ಅವರನ್ನು ಕಟ್ಟಿ ಹಾಕಿದ್ರೆ ಏನು ಪ್ರಯೋಜನವಿದೆ ಎಂದರು. ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧೆಯ ಪ್ರಸ್ತಾಪವಿಲ್ಲ. ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಕುರಿತು ಮಾತನಾಡಿ, ಅವರು ಹಿಂದೂಪರ ಸಂಘಟನೆ ಗಳಲ್ಲಿ ಇರಬಹುದು. ಬೇರೆ ಪಾರ್ಟಿಯಲ್ಲೂ ಇರಬಹುದು. ಆದರೆ, ಈ ಪ್ರಕರಣವನ್ನು ವೈಯಕ್ತಿಕವಾಗಿ ನೋಡಬೇಕು ಎಂದು ಹೇಳಿದ್ದಾರೆ.

Exit mobile version