Site icon PowerTV

ಹೆತ್ತ ಮಗುವನ್ನು ಕೆಸರಿನಲ್ಲಿ ಹೂತಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!

ಮಂಗಳೂರು :  ಗಂಡ- ಹೆಂಡತಿ ಜಗಳದಲ್ಲಿ ಒಂದೂವರೆ ತಿಂಗಳ ಮಗುವನ್ನು ಹೆತ್ತ ತಾಯಿಯೇ ಕೆಸರಿನಲ್ಲಿ ಹೂತು ಕೊಲೆಗೈದಿರುವ ಘಟನೆ ಮಂಜೇಶ್ವರದ ಉಪ್ಪಳ ಕೋಡಿಬೈಲು ಎಂಬಲ್ಲಿ ನಡೆದಿದೆ.

ಸುಮಂಗಲಾ (33), ಹಸುಗೂಸನ್ನು ಕೊಲೆಗೈದ ಮಹಿಳೆ,  ಕಳೆದ ಏಳೆಂಟು ತಿಂಗಳಿನಿಂದ ಗಂಡನಿಂದ ದೂರವಾಗಿದ್ದ ಈಕೆ ಉಪ್ಪಳದ ತನ್ನ ಅತ್ತೆ ಮನೆಯಲ್ಲಿಯೇ ವಾಸವಾಗಿದ್ದಳು, ಪತಿಯಿಂದ ದೂರವಾಗಿದ್ದ ಕಾರಣ ಮಾನಸಿಕ ಖಿನ್ನತೆಗೆ ಒಳಗಾದ್ದು ಒಂದೂವರೆ ತಿಂಗಳಿನ ಮಗುವನ್ನು ಗದ್ದೆಯ ಕೆಸರಿನಲ್ಲಿ ಹೂತಿಟ್ಟು ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇದನ್ನೂ ಓದಿ: ನಾಡಕಚೇರಿಯಲ್ಲಿ ಲಂಚಾವತಾರ: ಕ್ಯಾಮರಾ ಕಣ್ಣಲ್ಲಿ ಸೆರೆ!

ಆತ್ಮಹತ್ಯೆಗೆ ಯತ್ನಿಸಿದ ಸುಮಂಗಲಾಳನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ಈ ಪ್ರಕರಣವನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version