Site icon PowerTV

ಒಂಟಿ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ !

ರಾಮನಗರ : ಒಂಟಿ ಮನೆಗೆ ನುಗ್ಗಿದ ಖದೀಮರು ಚಿನ್ನಾಭರಣ ದೋಚಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ನೇರಳೆಕೆರೆ ಗ್ರಾಮದಲ್ಲಿ ನಡೆದಿದೆ.

ಗಂಗಲಕ್ಷ್ಮಮ್ಮ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ವೃದ್ದೆಯ ಚೈನ್, ವಾಲೆ, ಸೀರೆಗಳನ್ನ ಖದೀಮರು ಕದ್ದೊಯ್ದಿದ್ದಾರೆ. ಚೈನ್ ಕಿತ್ತುಕೊಳ್ಳುವ ವೇಳೆ ವೃದ್ಧೆ ವಿರೋಧಿಸಿದ್ದು, ಈ ವೇಳೆ ಖದೀಮರು ವೃದ್ದೆಯ ಎದೆಗೆ ಒದ್ದು ಮನೆಯ ಒಳಗೆ ಕೂಡಿ ಹಾಕಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಕೋಟ್ಯಾಂತರ ರೂ. ವಂಚನೆ ಆರೋಪ: ಚೈತ್ರ ಕುಂದಾಪುರ ಪೊಲೀಸ್​ ವಶಕ್ಕೆ!

ಅಸ್ವಸ್ಥಗೊಂಡಿದ್ದ ವೃದ್ದೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಸ್ಥಳಕ್ಕೆ ಡಿವೈಎಸ್​ಪಿ ಪ್ರವೀಣ್ ಕುಮಾರ್, CPI ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಕುದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version