Site icon PowerTV

ಮಹಿಷ ದಸರಾ ಆಚರಣೆ ವಿರೋಧ ; ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಕಿಡಿ

ಮೈಸೂರು : ಮಹಿಷ ದಸರಾ ಆಚರಣೆ ಕುರಿತು ಸಂಸದ ಪ್ರತಾಪ್ ಸಿಂಹ ಅವರು ವಿರೋಧ ವ್ಯಕ್ಯಪಡಿಸಿರುವ ಹಿನ್ನೆಲೆ ಎಂ ಲಕ್ಷ್ಮಣ ಅವರು ಕಿಡಿಕಾರಿದ್ದಾರೆ.

ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಅವರು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತುಕತೆ ನಡೆಸಿದ್ದು, ಮಹಿಷ ದಸರಾ ಆಚರಣೆ ಮಾಡದಂತೆ ಪ್ರತಾಪ್ ಸಿಂಹ ಅವರು ಧಮ್ಕಿ ಹಾಕುವುದನ್ನು ಮೊದಲು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ನಾನು ಕುಮಾರಸ್ವಾಮಿಯವರ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಮೊಬೈಲ್ ಕಾಲ್ ಮಾಡಿ ಧಮ್ಕಿ ಹಾಕ್ತಿದ್ದಾರೆ. ಚಿಕ್ಕಬಳ್ಳಾಪುರದಿಂದ ಅದ್ಯಾವನೋ ರೆಡ್ಡಿ ಎಂಬಾತ ನನಗೆ ಕಾಲ್ ಮಾಡಿ ಧಮ್ಕಿ ಹಾಕ್ತಿದ್ದಾನೆ, ಅಷ್ಟೇ ಅಲ್ಲ ನಾಲ್ಕೈದು ಮಂದಿ ಕಾಲ್ ಮಾಡಿ, ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಬೇಡಿ ಎಂದು ಧಮ್ಕಿ ಹಾಕಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಇದನ್ನು ಓದಿ : ನಾವು ಸರ್ಕಾರದ ಜೊತೆಗಿದ್ದೇವೆ, ಸಿಎಂ ಒತ್ತಡಕ್ಕೆ ಮಣಿಯಬಾರದು : ಬೊಮ್ಮಾಯಿ

ಇನ್ನೂ ಮಹಿಷ ದಸರಾ ಆಚರಣೆಗೆ ವಿರೋಧ ವ್ಯಕ್ತ ಪಡಿಸದೆ ಮತ್ತು ಧಮ್ಕಿ ಹಾಕದೇ ಪ್ರತಾಪ್ ಸಿಂಹ ಅವರು ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು. ದಸರಾ ಆಚರಣೆಗೆ ಅನುಮತಿ ಕೊಡುವ ಬಗ್ಗೆ ಪೋಲಿಸ್ ಇಲಾಖೆ ಹಾಗೂ ಸಂಬಂಧಪಟ್ಟವರು ನಿರ್ಧಾರ ಕೈಗೊಳ್ಳುತ್ತಾರೆ ಎಣದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಅವರು ಮಾತನಾಡಿದರು.

Exit mobile version