Site icon PowerTV

RTO ಕಚೇರಿಗಳ ಮೇಲೆ ಲೋಕಾ ದಾಳಿ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಎಲ್ಲಾ ಆರ್​ಟಿಒ(RTO) ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ.

ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಆರ್​ಟಿಒ ಕಚೇರಿಗಳಲ್ಲಿ ಕೆಲವು ಮಹತ್ವದ ಕಡತಗಳನ್ನು ಪರಿಶೀಲನೆ ನಡೆಸಲಾಗಿದೆ.

ಬೆಂಗಳೂರಿನ ಯಶವಂತಪುರ, ಜ್ಞಾನಭಾರತಿ ನಗರ, ಇಂದಿರಾ ನಗರ ಸೇರಿದಂತೆ ಇತರೆ ಆರ್​ಟಿಒ ಕಚೇರಿಗಳ ಮೇಲೆ ದಾಳಿ ನಡೆಸಿ, ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯಾದ್ಯಂತ ಆರ್​ಟಿಒ ಕಚೇರಿಗಳ ವಿರುದ್ದ ದೂರು ಬಂದಿದೆ. ದೂರಿನ ಅನ್ವಯ ಇವತ್ತು ಪರಿಶೀಲನೆ ನಡೆಸುತಿದ್ದೇವೆ. ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಬಾರದು. ಪ್ರತಿಯೊಂದು ಸಮಸ್ಯೆ ಗಳನ್ನು ನಾವು ಕೇಳ್ತಿವೆ. ಸಾರ್ವಜನಿಕರ ಪ್ರತಿಯೊಂದು ದೂರನ್ನು ಪರಿಶೀಲನೆ ಮಾಡಲಾಗುತ್ತೆ. ಅಕ್ರಮ ನಡೆದಿದ್ದರೆ ಅವರ ವಿರುದ್ದ ಕೇಸ್ ದಾಖಲು ಮಾಡಲಾಗುತ್ತೆ, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Exit mobile version