Site icon PowerTV

ಬೃಹತ್ ಮೊತ್ತಕ್ಕೆ ಸೇಲಾಯ್ತು ‘ಜವಾನ್’ ಒಟಿಟಿ ಹಕ್ಕು!

ಮುಂಬೈ: ಬಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿರುವ ಕಿಂಗ್​ ಖಾನ್, ಶಾರುಖ್ ಖಾನ್ ನಟನೆಯ ‘ಜವಾನ್’​ ಚಿತ್ರ, ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುವ ಮೂಲಕ ಸಿನಿಪ್ರಿಯರಿಂದ ಉತ್ತಮ ರೆಸ್ಪಾನ್ಸ್​ ಪಡೆದಿದೆ.

ಇದನ್ನೂ ಓದಿ: ಲಂಕಾ ದಹನ.. ಭಾರತಕ್ಕೆ ಭರ್ಜರಿ ಗೆಲುವು

ಸದ್ಯ ಈ ಮಧ್ಯೆ ಚಿತ್ರದ ಡಿಜಿಟಲ್​ ಹಕ್ಕುಗಳು ಇದೀಗ ಬೃಹತ್​ ಮೊತ್ತಕ್ಕೆ ನೆಟ್​ಫ್ಲಿಕ್ಸ್ ಪಾಲಾಗಿದೆ. ಕೆಲವು ವರ್ಷಗಳ ನಂತರ ‘ಜವಾನ್’ ಮುಖೇನ ಮೊತ್ತೊಮ್ಮೆ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳನ್ನು ಮನರಂಜಿಸಿದ ಶಾರೂಖ್​ ಖಾನ್ ಚಿತ್ರ, ಬಿಡುಗಡೆಗೊಂಡ ಮೂರನೇ ದಿನಕ್ಕೆ 200 ಕೋಟಿ ರೂ. ಗಳಿಸಿತು. ಇದರೊಟ್ಟಿಗೆ ಐದನೇ ದಿನಕ್ಕೆ ಕಾಲಿಟ್ಟ ಚಿತ್ರವು 300 ಕೋಟಿ ರೂ. ಆದಾಯವನ್ನು ಗಳಿಕೆ ಮಾಡಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.

ವರದಿಯ ಪ್ರಕಾರ, ಇಂದಿಗೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ‘ಜವಾನ್’​ ಚಿತ್ರದ ಒಟಿಟಿ ಡಿಜಿಟಲ್ ಹಕ್ಕುಗಳನ್ನು ಚಿತ್ರತಂಡ 250 ಕೋಟಿ ರೂಪಾಯಿಗೆ ನೆಟ್‌ಫ್ಲಿಕ್ಸ್‌ಗೆ ಮಾರಾಟ ಮಾಡಿದೆ ಎಂದು ತಿಳಿಸಿದೆ. ಸದ್ಯ ಚಿತ್ರ ತಯಾರಕರು ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆ ಅಧಿಕೃತ ಸ್ಟ್ರೀಮಿಂಗ್ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ.

Exit mobile version