Site icon PowerTV

ಕನಿಷ್ಠ ಎರಡು ಲಕ್ಷ ವೋಟ್​ನಿಂದ ಗೆಲ್ತೀನಿ : ಖರ್ಗೆಗೆ ಜಾಧವ್ ಸವಾಲ್

ಕಲಬುರಗಿ : ಕನಿಷ್ಠ ಒಂದುವರೆಯಿಂದ ಎರಡು ಲಕ್ಷ ಮತಗಳ ಅಂತರದಿಂದ ನಾವು ಗೆಲುವು ಸಾಧಿಸುತ್ತೇವೆ ಎಂದು ಖರ್ಗೆ ಫ್ಯಾಮಿಲಿಗೆ ಕಲಬರಗಿ ಸಂಸದ ಡಾ. ಉಮೇಶ್ ಜಾಧವ್ ಸವಾಲೆಸೆದಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರೇ ಸ್ಪರ್ಧೆ ಮಾಡಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. 100ಕ್ಕೆ 100ರಷ್ಟು ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸನಾತನ ಧರ್ಮ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಖರ್ಗೆ ಅವರು ಹಿರಿಯ ರಾಜಕಾರಣಿ, ಬಹಳ ಚತುರತೆಯಿಂದ ಮಾತನಾಡ್ತಾರೆ. ಅವರು ರಾಜಕೀಯ ಬೇರೆ ಧರ್ಮ ಬೇರೆ ಅಂತ ಮಾತನಾಡಿದ್ದಾರೆ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಇದು ಸರಿಯಲ್ಲ, ನಿಮ್ಮ ನಿಲುವು ಏನು ಎನ್ನುವುದು ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಖರ್ಗೆ ಸ್ಪರ್ಧೆ ಮಾಡ್ತಾರಾ?

ನಾವಾದ್ರೆ ಸನಾತನ ಧರ್ಮ ಸೇರಿ ಎಲ್ಲ ಧರ್ಮವನ್ನು ಒಪ್ಪಿಕೊಳ್ಳುತ್ತೇವೆ. ಜನರಿಗೆ ಕನ್ಫ್ಯೂಷನ್ ಮಾಡುವಂತಹ ರಿಪ್ಲೈ ಮಲ್ಲಿಕಾರ್ಜುನ ಖರ್ಗೆ ಕೊಟ್ಟಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಯ ಬಗ್ಗೆಯೂ ಮಲ್ಲಿಕಾರ್ಜುನ ಖರ್ಗೆ ಅವರು ಇದೇ ರೀತಿ ಮಾತನಾಡಿದ್ದಾರೆ. ಅವರ ಕೆಲವು ಹೇಳಿಕೆಗಳು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟವಾಗುತ್ತದೆ ಎಂದು ಚಾಟಿ ಬೀಸಿದ್ದಾರೆ.

Exit mobile version