Site icon PowerTV

ನನ್ನನ್ನು ಮುಂಬೈನಲ್ಲೇ ಸಂಪರ್ಕ ಮಾಡಿದ್ರು : ಮಾಜಿ ಸಚಿವ ನಾರಾಯಣ ಗೌಡ

ಬೆಂಗಳೂರು : ‘ನನ್ನ ಕಾಲಿಗೆ ಸಮಸ್ಯೆ ಆಗಿತ್ತು. ಹಾಗಾಗಿ, ಮುಂಬೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ನನ್ನ ಬ್ರೆಡ್ ಆಂಡ್ ಬಟರ್ ಮುಂಬೈ. ನಾನು ಏನೇ ದುಡಿದ್ರೂ ಮುಂಬೈನಲ್ಲೇ ದುಡಿದು, ಇಲ್ಲೇ ಖರ್ಚು ಮಾಡಬೇಕು. ಅಶ್ವತ್ಥನಾರಾಯಣ ಅವರು ನನ್ನನ್ನ ಮುಂಬೈನಲ್ಲೇ ಸಂಪರ್ಕ ಮಾಡಿದ್ರು. ನನ್ನ ಮೇಲೆ ಅಪಪ್ರಚಾರ ಬೇಡ. ಏನೇ ಇದ್ರೂ ನಾನೇ ಹೇಳುತ್ತೇನೆ’ ಎಂದು ಮಾಜಿ ಸಚಿವ ನಾರಾಯಣ ಗೌಡ ಹೇಳಿದರು.

ನಾರಾಯಣ ಗೌಡ ಕಾಂಗ್ರೆಸ್ ಸೇರ್ತಾರೆ ಎಂಬ ವದಂತಿ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಕೇಳೋ ಪ್ರಶ್ನೆ ತಪ್ಪಿಲ್ಲ. ಆದ್ರೆ, ನಾನು ಎಂದೂ ಕಾಂಗ್ರೆಸ್ ಹೋಗೋದಿಲ್ಲ. ನಾನು ಎಲ್ಲೂ ಹೋಗ್ತೀನಿ ಅಂತ ಹೇಳಿಲ್ಲ. ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಭಾರತದಲ್ಲಿ ಬಿಜೆಪಿ ಬೆಳೆಯಲು ಪ್ರಧಾನಿ ನರೇಂದ್ರ ಮೋದಿ ಕಾರಣ. ಮೋದಿ ಅವರ ಬಗ್ಗೆ ವಿಶ್ವವೇ ಕೊಂಡಾಡುತ್ತಿದೆ. ಹಿಂದೂ ಧರ್ಮದ ಬಗ್ಗೆ ಫಾಲೋ ಮಾಡ್ತಿದ್ದಾರೆ. ಪಕ್ಷ ಬಿಟ್ಟು ಹೋಗೋದಾದ್ರೆ ನಾನೇ ಹೇಳ್ತೀನಿ. ಅಶ್ವತ್ಥನಾರಾಯಣ್ ಅವರು ನನಗೆ ಬಹಳ ದೊಡ್ಡ ಶಕ್ತಿ ತುಂಬಿದ್ರು. ನಾನು ಮಂತ್ರಿಯಾಗಬೇಕಾದ್ರೆ, ಶಾಸಕನಾಗಬೇಕಾದ್ರೆ ಅಶ್ವತ್ಥನಾರಾಯಣ ಅವರ ಸಹಾಯ ಇದೆ ಎಂದು ನಾರಾಯಣ ಗೌಡ ಹೇಳಿದರು.

Exit mobile version