Site icon PowerTV

ಮಂಡ್ಯದಲ್ಲಿ ಹರಿದ ನೆತ್ತರು : ಗಣೇಶ ಕೂರಿಸುವ ವಿಚಾರಕ್ಕೆ ಬಿತ್ತು ಯುವಕನ ಹೆಣ

ಮಂಡ್ಯ : ಗಣೇಶ ಕೂರಿಸುವ ವಿಚಾರದ ಹಿನ್ನೆಲೆ ಕಿರಿಕ್ ಮಾಡಿಕೊಂಡಿದ್ದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗಾಂಧಿನಗರದಲ್ಲಿ ನಡೆದಿದೆ.

ಗಣೇಶ ಚತುರ್ಥಿ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆ ನಗರಗಳಲ್ಲಿ ಹಾಗೂ ತಮ್ಮ ತಮ್ಮ ಏರಿಯಾಗಳಲ್ಲಿ ಗಣೇಶನನ್ನು ಕೂರಿಸಲು ಸಿದ್ಧತೆಗಳು ನಡೆಯುತ್ತಿವೆ. ಅದರ ಬೆನ್ನಲ್ಲೇ ಗಣೇಶ ಕೂರಿಸುವ ವಿಚಾರವಾಗಿ ನಿನ್ನೆ ರಾತ್ರಿ ಕೆಲ ಯುವಕರ ಮಧ್ಯೆ ಗಲಾಟೆ ನಡೆದಿದೆ.

ಇದನ್ನು ಓದಿ : ಬಸ್ ಗೆ ಬೈಕ್ ಡಿಕ್ಕಿ ; ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ

ಬಳಿಕ ಗಲಾಟೆ ಅತಿರೇಕಕ್ಕೆ ಹೋಗಿ ಅಕ್ಷಯ್ (22) ಮೃತ ದುರ್ದೈವಿ. ಎಂಬ ಯುವಕನನ್ನು ಅಟ್ಟಾಡಿಸಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಎಂದು ಮಂಡ್ಯದಲ್ಲಿ ಎಸ್ಪಿ ಎನ್. ಯತೀಶ್ ಅವರು ಈ ಘಟನೆ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅಕ್ಷಯ್ ಮೇಲೆ ಹಲ್ಲೆ ನಡೆದಿದ್ದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಾತ್ರಿಯೇ ಈ ಕೊಲೆ ಪ್ರಕರಣದ ದಾಖಲಾಗಿದ್ದು, ಆರೋಪಿಗಳ ಮಾಹಿತಿ ದೊರಕಿದೆ. ಶೀಘ್ರದಲ್ಲೇ ಆರೋಪಿಗಳ ಪತ್ತೆ ಹಚ್ಚುತ್ತೇವೆ ಎಂದು ಎಸ್ಪಿ ಎನ್. ಯತೀಶ್ ಅವರು ಹೇಳಿದ್ದಾರೆ.

Exit mobile version