Site icon PowerTV

ಇವತ್ತು ಹೋಗಿ ನಾಳೆ ವಾಪಸ್ ಬರ್ತೀನಿ : ದೆಹಲಿಯತ್ತ ಬಿಎಸ್​ವೈ

ಬೆಂಗಳೂರು : ಇಂದು ದೆಹಲಿಯಲ್ಲಿ ಚುನಾವಣೆ ಸಮಿತಿ ಸಭೆ ಇದೆ. ನಾನು ಅಪೇಕ್ಷಿತನಿರುವುದರಿಂದ ಇವತ್ತು ಹೋಗಿ ನಾಳೆ ವಾಪಸ್ ಬರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಭವಿಷ್ಯ, ಲೋಕಸಭಾ ಚುನಾವಣೆ ಬಗ್ಗೆಯೂ ಚುನಾವಣೆ ಚರ್ಚೆ ಆಗಬಹುದು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ತಿಳಿಸಿದರು.

ಇಂದು ಕಾವೇರಿ ನೀರಿನ ಬಗ್ಗೆ ಸರ್ವಪಕ್ಷ ಕರೆದಿರುವ ಸಭೆ ವಿಚಾರವಾಗಿ ಮಾತನಾಡಿದ ಅವರು, ನನ್ನನ್ನು ಸಭೆಗೆ ಆಹ್ವಾನಿಸಿದ್ದರು. ಅನಿವಾರ್ಯ ಕಾರಣ ದೆಹಲಿಗೆ ಹೋಗಬೇಕಿತ್ತು. ಹೀಗಾಗಿ, ಸಭೆಗೆ ಬರುವುದಕ್ಕೆ ಆಗಲ್ಲ ಅಂತ ತಿಳಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

Exit mobile version