Site icon PowerTV

‘ನರಲೋಕದ ಜನಕೆ ಆನೆ ಕಿರೀಟ ಇಟ್ಟಿತಲೆ ಎಚ್ಚರಲೇ..!’ : ಕಾರ್ಣಿಕ ಅಚ್ಚರಿ ಭವಿಷ್ಯ

ಬೆಂಗಳೂರು : ದಾವಣಗೆರೆ ಜಿಲ್ಲೆಯ ಐತಿಹಾಸಿಕ ಆನೆಕೊಂಡದ ಬಸವೇಶ್ವರ ಜಾತ್ರೆ ವೇಳೆ ಬಸವೇಶ್ವರ ಸ್ವಾಮೀಜಿ ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಸ್ವಾಮೀಜಿಗಳು ಈ ವರ್ಷದ ಘಟನೆಗಳ ಬಗ್ಗೆ ತಮ್ಮದೇ ಆದ ಭವಿಷ್ಯಗಳನ್ನು ನುಡಿದಿದ್ದಾರೆ. ಅದರಂತೆಯೇ ಬಸವೇಶ್ವರ ಶ್ರೀಗಳ ಭವಿಷ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಶ್ರಾವಣ ಸೋಮವಾರ, ‘ರಾಮ ರಾಮ ಎಂದು ನುಡಿದೀತ್ತಲೆ, ಮುತ್ತೈದೆಯರಿಗೆ ಮಹಾತಾಯಿ ಉಡಿ ತುಂಬಿಯಾಳಲೆ, ಮಹಾತಾಯಿ ಬೇರುಸೊಪ್ಪು ಬೀಸಿತ್ತಲೆ ಎಚ್ಚರಲೇ’ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ನಾನಾ ಬಗೆಯ ವಿಶ್ಲೇಷಣೆಗಳು ನಡೆಯುತ್ತಿದೆ.

ಶ್ರಾವಣ ಮಾಸದ ಕಡೆಯ ಸೋಮವಾರ ನಡೆದ ಜಾತ್ರಾ ಮಹೋತ್ಸವಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು. ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ಣಿಕ ಮತ್ತು ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿ ಲೋಕ ಕಲ್ಯಾಣಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

Exit mobile version