Site icon PowerTV

ಬಿಎಸ್​ವೈ ಯೂಟರ್ನ್ : ನಾಳೆ ದೆಹಲಿಯತ್ತ ಯಡಿಯೂರಪ್ಪ ಪ್ರಯಾಣ

ಬೆಂಗಳೂರು : 2024ರ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಕೇಂದ್ರ ನಾಯಕತ್ವ ನಿರ್ಧರಿಸಲಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುವುದಾಗಿ ಹೇಳಿರುವ ಯಡಿಯೂರಪ್ಪ, ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಇದುವರೆಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ, ಮೈತ್ರಿ ಬಗ್ಗೆ ಕೇಂದ್ರ ನಾಯಕರದ್ದೇ ಅಂತಿಮ ನಿರ್ಧಾರ. ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ಅವರ ಸಲಹೆಗಳನ್ನು ಪಡೆಯಲು ಪ್ರಯತ್ನಿಸಲಾಗುವುದು. ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲು ನಾಳೆ ದೆಹಲಿಗೆ ಹೋಗುತ್ತಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.

ದಿಲ್ಲಿಯಲ್ಲಿ ಸೀಟು ಹಂಚಿಕೆ ಕಸರತ್ತು

ರಾಷ್ಟ್ರ ರಾಜಧಾನಿಯಲ್ಲಿ ಕಮಲ ಹಾಗೂ ದಳ ದೋಸ್ತಿ ಮೈತ್ರಿ ಸೀಟು ಹಂಚಿಕೆಯ ಕಸರತ್ತು ಜೋರಾಗಿದೆ. ನಾಳೆ ಅಥವಾ ಸೆಪ್ಟೆಂಬರ್ 15 ರಂದು ದೆಹಲಿಯಲ್ಲಿ ಜೆಡಿಎಸ್ ವರಿಷ್ಠರ ಜೊತೆ ಸಭೆ ನಡೆಸಲು ಸಿದ್ದತೆ ನಡೆಸಿದ್ದು, ಲೋಕಸಭಾ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ. 2 ಸೂತ್ರದಲ್ಲಿ ಸೀಟ್‌ ಶೇರಿಂಗ್ ಕುರಿತು ಬಿಜೆಪಿ, ಜೆಡಿಎಸ್ ಚರ್ಚೆ ನಡೆಸಲಿದ್ದು, ಜೆಡಿಎಸ್‌ಗೆ ಬಿಜೆಪಿ 4 ಅಥವಾ 5 ಕ್ಷೇತ್ರ ಬಿಟ್ಟುಕೊಡೋ ಸಾಧ್ಯತೆಯಿದೆ. ಇನ್ನು, 23+5 ಅಥವಾ 24+4 ಸೂತ್ರದಡಿ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಮಾಡಲಿದ್ದು, ಪ್ರಧಾನಿ ಮೋದಿ ಸೂಚನೆ ಕೊಟ್ಟ ಕೂಡಲೇ ಸಭೆ ನಡೆಯಲಿದೆ.

Exit mobile version