Site icon PowerTV

ಅಕ್ರಮ ಆಸ್ತಿಗಳಿಕೆ: ದೇವನಹಳ್ಳಿ ತಹಶಿಲ್ದಾರ್​ ಶಿವರಾಜ್ ಅಮಾನತು!

ದೇವನಹಳ್ಳಿ : ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಕಾರಣಕ್ಕೆ ದೇವನಹಳ್ಳಿ ತಹಶಿಲ್ದಾರ್​ ಶಿವರಾಜ್​​ ಅವರನ್ನು ಅಮಾನುಮತು ಮಾಡಲಾಗಿದೆ.

ಅಧಿಕ ಆಸ್ತಿ ಹೊಂದಿರುವ ಕುರಿತ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಬಳಿಕ ಆಸ್ತಿ ಹೊಂದಿರುವುದು ಸಾಬೀತಾದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ತಹಸೀಲ್ದಾರ್ ಶಿವರಾಜ್ ಅವರನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಸಿಹಿ ಸುದ್ದಿ: ಗೌರಿ ಗಣೇಶ ಹಬ್ಬಕ್ಕೆ 1,200 ಹೆಚ್ಚುವರಿ ಬಸ್!

ಇದೇ ವೇಳೆ ಲೋಕಾಯುಕ್ತ ಅಧಿಕಾರಿಗಳು ತಹಶಿಲ್ದಾರ್ ಶಿವರಾಜ್ ಜೊತೆಗೆ ಅವರ ಖಾಸಗಿ ಡ್ರೈವರ್ ಮನೆ ಮೇಲೂ ಸಹ ದಾಳಿ ನಡೆಸಿದ್ದರು. ಇದೀಗ ಆದಾಯಕ್ಕಿಂತ ಅಧಿಕ ಆಸ್ತಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Exit mobile version