Site icon PowerTV

ಕೋಲಾರದಲ್ಲಿ ಹರಿದ ನೆತ್ತರು..! ಪತ್ನಿ, ಮಾವನನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪಾಪಿ

ಕೋಲಾರ : ಕೋಲಾರದಲ್ಲಿ ಕೌಟುಂಬಿಕ ಕಲಹಕ್ಕೆ ನೆತ್ತರು ಹರಿದಿದೆ. ಗಂಡನೇ ತನ್ನ ಪತ್ನಿ ಹಾಗೂ ಮಾವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘನಘೋರ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿಯಲ್ಲಿ ನಡೆದಿದೆ.

ರಾಧ ಹಾಗೂ ಈಕೆಯ ತಂದೆ ಮುನಿಯಪ್ಪ ಸಾವನ್ನಪ್ಪಿರುವ ದುರ್ದೈವಿಗಳು. ನಾಗೇಶ್ ಕೊಲೆ ಮಾಡಿರುವ ಪಾಪಿ ಪತಿ. ಈ ಘಟನೆಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.

ಮೃತ ರಾಧ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೇ ಬಂದ ಆರೋಪಿ ನಾಗೇಶ್ ಏಕಾಏಕಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ಬಿಡಿಸಲು ಹೋದ ರಾಧ ತಂದೆ ಮುನಿಯಪ್ಪಯನನ್ನು ಹತ್ಯೆಗೈದು ವಿಕೃತಿ ಮೆರೆದಿದ್ದಾನೆ.

ಆರೋಪಿ ಕಾಲು, ಕೈಗೆ ಗುಂಡು

ಅಷ್ಟೇ ಅಲ್ಲದೆ, ಬೀಡಿಸಲು ಹೋದ ಕುಟುಂಬಸ್ಥರ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ. ಘಟನೆ ಬಳಿಕ ಸ್ಥಳದಿಂದ ಎಸ್ಕೇಪ್ ಆಗಲು ಆರೋಪಿ ಯತ್ನಿಸಿದ್ದಾನೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೆಲೇಯೂ ಮಚ್ಚು ಹಾಗೂ ಗ್ಯಾಸ್ ಸಿಲಿಂಡರ್ ಬೀಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಹೀಗಾಗಿ, ಪೊಲೀಸರು ಆರೋಪಿ ನಾಗೇಶ್ ಕಾಲಿಗೆ, ಕೈಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಗ್ರಾಮದಲ್ಲಿ 144 ಸೆಕ್ಷನ್ ಜಾರಿ

ಬಳಿಕ ಆರೋಪಿ ನಾಗೇಶ್ ನನ್ನು ಬಂಧಿಸಿ,ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂಬಿಹಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಗ್ರಾಮದಲ್ಲಿ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಆಶ್ರುವಾಯು ಸಿಡಿಸಿದ್ದಾರೆ. ಮುಂಚಾಗೃತ ಕ್ರಮವಾಗಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Exit mobile version