Site icon PowerTV

ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಸಂಬಂಧ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಲಿದೆ.

ಸಮಿತಿಯ ಅಧ್ಯಕ್ಷ ವಿನೀತ್ ಗುಪ್ತ ಅಧ್ಯಕ್ಷತೆಯಲ್ಲಿ ವರ್ಚುವಲ್‌ ಮೂಲಕ ಮಧ್ಯಾಹ್ನ 2.30ಕ್ಕೆ ಸಭೆ ನಡೆಯಲಿದ್ದು, ಕಾವೇರಿ ಕಣಿವೆಯ ಜಲಾಶಯಗಳ ಸ್ಥಿತಿ, ನೀರು ಬಿಡುಗಡೆ ಪ್ರಮಾಣ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಇದನ್ನೂ ಓದಿ: ರೇಷನ್​ ಕಾರ್ಡ್​ನಲ್ಲಿದ್ದ​ 5.19 ಲಕ್ಷ ಫಲಾನುಭವಿಗಳ ಹೆಸರು ಡಿಲೀಟ್!

ಜಲಾಶಯಗಳ ವಾಸ್ತವ ಸ್ಥಿತಿ ಕುರಿತು ಸಮಿತಿಯು ಪ್ರಾಧಿಕಾರಕ್ಕೆ ವರದಿ ನೀಡಲಿದೆ. ಇನ್ನಷ್ಟು ನೀರು ಬಿಡುಗಡೆಗೆ ಶಿಫಾರಸು ಮಾಡುವ ಸಾಧ್ಯತೆಯೂ ಇದೆ. ಸಾಮಾನ್ಯವಾಗಿ ಸಮಿತಿಯ ಸಭೆ ನಡೆದ 2-3 ದಿನಗಳಲ್ಲಿ ಪ್ರಾಧಿಕಾರದ ಸಭೆ ನಡೆಯಲಿದೆ. ಆದರೆ, ಈ ಸಲ ಪ್ರಾಧಿಕಾರದ ಸಭೆಯ ಕುರಿತು ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿನಿತ್ಯ ಅಂದಾಜು ಅರ್ಧ TMC ಅಡಿ ನೀರು ಬಿಡುಗಡೆ ಮಾಡುವಂತೆ ಸಮಿತಿಯು ಆಗಸ್ಟ್ 29 ರಂದು ಶಿಫಾರಸು ಮಾಡಿತ್ತು.

Exit mobile version