Site icon PowerTV

ಜಮೀನು ವಿಚಾರಕ್ಕೆ ಅಣ್ಣ-ತಂಗಿ ಮಧ್ಯೆ ಡಿಶುಂ.. ಡಿಶುಂ..!

ರಾಮನಗರ : ಜಮೀನು ವಿಚಾರಕ್ಕೆ ಅಣ್ಣ-ತಂಗಿಗೆ ಹೊಡೆದು ಗಲಾಟೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕುರಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಸಹೋದರ ರಾಜಣ್ಣ ತಂಗಿ ಜಯಮ್ಮಗೆ ಕಾಲಿನಿಂದ ಒದ್ದು, ದೊಣ್ಣೆಯಿಂದ ಹೊಡೆದು ದರ್ಪ ತೋರಿದ್ದಾನೆ. ರಾಜಣ್ಣ ಮನೆಯಲ್ಲಿ ಯಾರು ಇಲ್ಲದ ವೇಳೆ ಏಕಾಏಕಿ ಬಂದು ಜಯಮ್ಮರ ಜೊತೆ ಗಲಾಟೆ ಮಾಡಿದ್ದು, ಕೊಲೆ ಬೆದರಿಕೆ ಹಾಕಿದ್ದಾನೆ.

ತಂಗಿ ಜಯಮ್ಮಳನ್ನು ರಸ್ತೆಯಲ್ಲೇ ರಾಜಣ್ಣ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ನಡುವೆ ಇಬ್ಬರು ಬಂದು ಗಲಾಟೆ ಬಿಡಿಸಲು ಹರಸಾಹಸ ಬಟ್ಟಿದ್ದಾರೆ. ಆದರೂ ಹಠ ಬಿಡದ ರಾಜಣ್ಣ ಹಲ್ಲೆ ಮಾಡಿದ್ದಾನೆ. ಮೊಬೈಲ್​ಬಲ್ಲಿ ವಿಡಿಯೋ ಸೆರೆ ಹಿಡಿಯುತ್ತಿರುವವರ ಮೇಲೆಯೂ ಆವಾಜ್ ಹಾಕಿದ್ದಾರೆ.

ಕಳೆದ ಭಾನುವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಾಯಾಳು ಜಯಮ್ಮಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ 7 ಜನರ ಮೇಲೆ ಎಂ.ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.

Exit mobile version