Site icon PowerTV

ಕರುಣಾನಿಧಿ ತಳಿಯೇ ವಿಷದ ಹಾವು : ಶಾಸಕ ಯತ್ನಾಳ್

ವಿಜಯಪುರ : ಬಿಜೆಪಿ ವಿಷದ ಹಾವು ಎಂದಿರುವ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್​ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ‘ಕರುಣಾನಿಧಿ ತಳಿಯೇ ವಿಷದ ಹಾವು. ಕೆಟ್ಟ ತಳಿ ಇದೆ, ಈ ತಳಿ ದೇಶಕ್ಕೆ ನಿಷ್ಠೆ ಇಲ್ಲ, ಧರ್ಮಕ್ಕೆನಿಷ್ಠೆ ಇಲ್ಲ. ಒಂದು ಕಾಲದಲ್ಲಿ LTTEಗೆ ಸಪೋರ್ಟ್ ಮಾಡಿದವರು. ದೇಶ ವಿರೋಧಿ ಚಟುವಟಿಕೆಗೆ ಸಪೋರ್ಟ್ ಮಾಡಿದವರು, ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದರು.

ಸನಾತನ ಧರ್ಮ ಕಾಗೆ ಎಂದಿದ್ದ ನಟ ಪ್ರಕಾಶ್ ರೈ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ್ ಅವರು, ‘ಪ್ರಕಾಶ್ ರೈ ಅವರನ್ನು ಹಂದಿಗೆ ಹೋಲಿಸಿದರು. ಪ್ರಕಾಶ್ ರೈ ಹಂದಿ ಇದ್ದ ಹಾಗೆ, ಪ್ರಕಾಶ್ ರೈ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ. ಸ್ವಚ್ಛ ಮಾಡಲು ಹಂದಿ ಇರುತ್ತದೆ, ಹಾಗೆ ನಮ್ಮಲ್ಲೂ ಪ್ರಕಾಶ್ ರೈ ಎನ್ನುವ ಹಂದಿ ಇದೆ’ ಎಂದು ಲೇವಡಿ ಮಾಡಿದರು.

Exit mobile version