Site icon PowerTV

ಮೋದಿ ನೀತಿಯಿಂದ ಶ್ರೀಮಂತರಿಗಷ್ಟೇ ಲಾಭ : ಪ್ರಿಯಾಂಕಾ ಕಿಡಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳು ಬರೀ ಶ್ರೀಮಂತರಿಗಷ್ಟೇ ಲಾಭದಾಯಕಯಾಗಿವೆಯೇ ಹೊರತು ಬಡವರಿಗಲ್ಲ ಎಂದು ಮೋದಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇರ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಟೋಂಕ್ ಜಿಲ್ಲೆಯ ನಿವಾಯಿಯಲ್ಲಿ ನಡೆದ ಕಾಂಗ್ರೆಸ್‌ ರಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

‘ಪ್ರಧಾನಿ ಅವರು ವಿದೇಶ ಪ್ರವಾಸ ಹೋಗುತ್ತಾರೆ ಮತ್ತು ಅಲ್ಲಿ ತಮ್ಮ ಉದ್ಯಮಿ ಸ್ನೇಹಿತರಿಗಾಗಿ ಒಪ್ಪಂದಗಳನ್ನು ಮಾಡಿಕೊಂಡು ಬರುತ್ತಾರೆ. ವಿದೇಶಕ್ಕೆ ತೆರಳಿ ವಾಪಸ್‌ ಬರುವ ಮೋದಿ, ನಮ್ಮ ಗೌರವ ಹೆಚ್ಚಿದೆ ಎಂದು ಹೇಳುತ್ತಾರೆ. ಬಳಿಕ ಅವರು ತಮ್ಮ ಉದ್ಯಮಿ ಸ್ನೇಹಿತರಿಗಾಗಿ ಒಪ್ಪಂದಗಳನ್ನು ಮಾಡಿಕೊಂಡು ಬಂದಿದ್ದಾರೆ ಎಂಬುದು ನಮಗೆ ತಿಳಿದು ಬರುತ್ತದೆ. ಅಂತೆಯೇ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಅಲ್ಲಿಂದಲೇ ವ್ಯಾಪಾರ ಕುದುರುತ್ತದೆ’ ಎಂದು ಕುಟುಕಿದ್ದಾರೆ.

ಜನರ ಹಿತಾಸಕ್ತಿಗಳಿಗಿಂತಲೂ ಪ್ರಧಾನಿ ಮೋದಿ ಅವರು ಉದ್ಯಮಿ ಸ್ನೇಹಿತರ ಹಿತಾಸಕ್ತಿಯತ್ತಲೇ ತಮ್ಮೆಲ್ಲ ಗಮನವವನ್ನು ಹರಿಸುತ್ತಾರೆ. ಬಡವರು ಮತ್ತು ಮಧ್ಯಮ ವರ್ಗದವರನ್ನು ನಿರ್ಲಕ್ಷಿಸಲಾಗಿದ್ದರೂ, ಅಧಿಕಾರದಲ್ಲಿರುವುದೇ ಬಿಜೆಪಿಯ ಏಕೈಕ ಗುರಿಯಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

Exit mobile version