Site icon PowerTV

ಮೋದಿ ಪಾಪ್ಯುಲಾರಿಟಿ ಇಳೀತಿದೆ, ಅವ್ರ ಆಟ ನಡೀತಿಲ್ಲ : ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು : ಅವರಿಗೆ.. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡೋಕೆ ಮೈತ್ರಿ ಅನಿವಾರ್ಯತೆ ಇಲ್ಲ. ಅವರ ಅಸ್ತಿತ್ವ ಕಾಪಾಡಿಕೊಳ್ಳೊಕೆ ಅಂತ ಮೈತ್ರಿ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಪಾಪ್ಯುಲಾರಿಟಿ ಇಳಿತಾ ಇದೆ. ಮೋದಿಯವರ ಆಟ ನಡೆಯುತ್ತಿಲ್ಲ ಅನ್ನೋದಕ್ಕೆ ಈ ಮೈತ್ರಿಯೇ ಸಾಕ್ಷಿ! ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಜೆಡಿಎಸ್​ನ ‘ಬಿ’ ಟೀಂ ಬಿಜೆಪಿ ಅನ್ನೋದು ಸಾಬೀತಾಗಿದೆ. 100 ದಿನಗಳೇ ಕಳೆದರೂ ಇನ್ನೂ ವಿಪಕ್ಷ ನಾಯಕರ ಆಯ್ಕೆ ಆಗಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಪಕ್ಷದ ಮೇಲೆ ಹಿಡಿತ ಇಲ್ಲ. ಒಂದು ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷದ ‘ಬಿ’ ಟೀಂ ತರಹ ಕೆಲಸ ಮಾಡ್ತಾ ಇದೆ ಎಂದು ಟೀಕಿಸಿದರು.

ಹೆಚ್​ಡಿಕೆ ವಿಪಕ್ಷ ನಾಯಕ ಆಗ್ತಾರಾ?

ಪದೇ ಪದೆ ಬಿಜೆಪಿಯಿಂದ ಕನ್ನಡಿಗರಿಗೆ ಅವಮಾನ ಆಗ್ತಾ ಇದೆ. ಸದನ ನಡೆಯುವಾಗ ಯಾರು ಹೆಚ್ಚೆಚ್ಚು ಪ್ರಶ್ನೆ ಕೇಳಿದರು ಗೊತ್ತಿದೆ. ಬಿಜೆಪಿಯವರ ಮೊನೋ ಆ್ಯಕ್ಟಿಂಗ್ ದೆಹಲಿ ಲೀಡರ್ಸ್ ಯಾರೂ ಗಮನಿಸಿಲ್ಲ. ಕುಮಾರಸ್ವಾಮಿ ವಿಪಕ್ಷ ನಾಯಕನಾಗ್ತಾರಾ? ಅಂತ ಬಿಜೆಪಿಯವರನ್ನೇ ಕೇಳಬೇಕು. ಕೇವಲ ಸೀಟ್ ಶೇರಿಂಗ್ ನಲ್ಲಿ ಮಾತ್ರಾನಾ? ಅಥವಾ ವಿಧಾನಸಭೆ ಒಳಗೂ ಸೀಟು ಶೇರಿಂಗ್ ಆಗುತ್ತಾ? ನೋಡಬೇಕು ಎಂದು ಕುಹಕವಾಡಿದರು.

ಇರೋದು ಒಂದೇ ಸಿಎಂ ಸ್ಥಾನ

ಬಿಕೆಹೆಚ್​ ವಾಗ್ದಾಳಿ ಬಗ್ಗೆ ಮಾತನಾಡಿದ ಖರ್ಗೆ, ಬಿ.ಕೆ ಹರಿಪ್ರಸಾದ್ ಎಲ್ಲಿಯೂ ಕೂಡ ಸಿದ್ದರಾಮಯ್ಯ ಹೆಸರು ಹೇಳಿಲ್ಲ. ಸಿಎಂ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಹರಿಪ್ರಸಾದ್​ಗೆ ಎಐಸಿಸಿ ಎಲ್ಲ ನಾಯಕರೂ ಕೂಡ ಗೊತ್ತಿದ್ದಾರೆ. ಏನೇ ಇದ್ದರೂ ಅವರು ಮತ್ತು ನಾಯಕರು ಮಾತನಾಡಿಕೊಳ್ತಾರೆ. ಸಮಾಜದ ಪರ ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ. ಯಾವುದೇ ರೀತಿಯ ಗೊಂದಲಗಳಿಲ್ಲ. ಇರುವುದು ಕೆಲವೇ ಸ್ಥಾನಗಳು. ಹೀಗಾಗಿ, ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ. ಇರೋದು ಒಂದೇ ಸಿಎಂ ಸ್ಥಾನ ಎಂದು ಹರಿಪ್ರಸಾದ್​ಗೆ ತಿರುಗೇಟು ಕೊಟ್ಟರು.

Exit mobile version