Site icon PowerTV

ಗೃಹಲಕ್ಷ್ಮೀಯರ ಮೊಬೈಲ್​ಗೆ ಮೆಸೇಜ್ ; ಬ್ಯಾಂಕ್​ನಲ್ಲಿ ಮಹಿಳೆಯರ ನೂಕುನುಗ್ಗಲು

ಶಿವಮೊಗ್ಗ : ಅರ್ಜಿ ಹಾಕಿದ ಗೃಹಲಕ್ಷ್ಮೀಯರ ಮೊಬೈಲ್​ಗೆ ಮೆಸೇಜ್ ಬಂದ ಹಿನ್ನೆಲೆ ಬ್ಯಾಂಕ್​ಗಳಿಗೆ ಸಾಗರೋಪಾದಿಯಲ್ಲಿ ಬರುತ್ತಿರುವ ಮಹಿಳೆಯರು.

ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದಾಗಿನಿಂದ ಮುಗಿಯದ ಗೃಹಲಕ್ಷ್ಮೀ ಯೋಜನೆ ಅವಾಂತರ. ಇಂದು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಿದ್ದ ಹಿನ್ನೆಲೆ 2000 ರೂ. ಹಣ ನಿಮ್ಮ ಖಾತೆಗೆ ಜಮಾ ಮಾಡಲಾಗಿದೆ ಎಂದು ಮೊಬೈಲ್​ಗೆ ಮೆಸೇಜ್ ಬಂದಿದೆ. ಈ ಹಿನ್ನೆಲೆ ಇಂದು ಬೆಳಗ್ಗೆಯಿಂದಲೂ ಬ್ಯಾಂಕ್ ಒಳಗಡೆ ಕಾಲಿಡಲೂ ಆಗದಷ್ಟು ಮಹಿಳೆಯರ ಜಮಾವಣೆ.

ಇದನ್ನು ಓದಿ : ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ

ಬ್ಯಾಂಕ್​ಗೆ ಬಂದ ಮಹಿಳೆಯರಿಗೆ ಸಿಬ್ಬಂದಿಗಳು ಪಾನ್ ಮತ್ತು ನಿಮ್ಮ ಆಧಾರ ಪ್ರತಿ ತರುವಂತೆ ಸೂಚನರ ನೀಡಿದ್ದು, ದಾಖಲಾತಿ ಹಿಡಿದು ಮತ್ತೆ ಬ್ಯಾಂಕ್ ನತ್ತ ನೂಕುನುಗ್ಗಲಾಗಿ ಮಹಿಳೆಯರು ದೌಡಯಿಸಿದ್ಧಾರೆ. ಇದರಿಂದ ಗೃಹಲಕ್ಷ್ಮೀಯರ ದಾಖಲಾತಿ ಪರಿಶೀಲನೆ ವೇಳೆ ನೂಕುನುಗ್ಗಲಾಗಿದ್ದು, ಮಹಿಳೆಯರ ನಿಯಂತ್ರಣಕ್ಕೆ ಬ್ಯಾಂಕ್ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.

ಮಹಿಳೆಯರು ಬ್ಯಾಂಕ್ ಸಿಬ್ಬಂದಿ ಜೊತೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ನೋಡಿ ಮನೆಗೆ ವಾಪಸ್ ಆಗುತ್ತಿರುವ ಬ್ಯಾಂಕ್​ನ ಇತರೆ ಗ್ರಾಹಕರು.

Exit mobile version