Site icon PowerTV

ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹವಾ ಮೆಂಟೈನ್ ಮಾಡಲು ಹೋಗಿ ಗೂಸಾ ತಿಂದ ಅಸಾಮಿ ಘಟನೆ ಚಂದ್ರ ಲೇಔಟ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇತ್ತೀಚೆಗೆ ಯುವಕರಿಗೆ ತಮ್ಮ ಏರಿಯಾಗಳಲ್ಲಿ ಹವಾ ಮೆಂಟೈನ್ ಮಾಡುವ ಹುಚ್ಚು ಹೆಚ್ಚಾಗಿದೆ. ಇದರ ಬೆನ್ನಲ್ಲೇ ಕೊದಂಡ ಸ್ವಾಮಿ ಎಂಬ ವ್ಯಕ್ತಿ ಬೇಕರಿಯೊಂದರಲ್ಲಿ ಚಾಕು ಹಿಡಿದು ಬೇಕರಿ ಮಾಲೀಕನಿಗೆ ಹೆದರಿಸಲು ಹೋಗಿದ್ದಾನೆ.

ಇದನ್ನು ಓದಿ : ಪಾಕ್ ಹುಟ್ಟಡಗಿಸಿದ ಭಾರತ.. ವಿರಾಟ್-ರಾಹುಲ್ ಭರ್ಜರಿ ಶತಕ

ಈ ವೇಳೆ ಚಾಕು ಹೊರ ತೆಗೆಯುತ್ತಿದ್ದಂತೆ ಅಲ್ಲೆ ಇದ್ದ ಸ್ಥಳೀಯರು ಆ ಪುಂಡನನ್ನು ಹಿಡಿದು ಬಡಿದಿದ್ದಾರೆ. ಬಳಿಕ ಪೆಟ್ಟು ತಿಂದು ಆಸ್ಪತ್ರೆಗೆ ಸೇರಿದ ಕೊದಂಡ ಸ್ವಾಮಿ. ಈ ಘಟನೆ ಹಿನ್ನೆಲೆ ಬೇಕರಿ ಮಾಲೀಕ ಠಾಣೆಗೆ ದೂರು ನೀಡದರು.

ಈ ಪ್ರಕರಣ ದಾಖಲಿಸಿಕೊಂಡ ಚಂದ್ರಲೇಔಟ್ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Exit mobile version