Site icon PowerTV

ಕಾಂಗ್ರೆಸ್​ಗೆ ದಲಿತರು, ಮುಸ್ಲಿಮರೇ ಮತದಾರರು : ಡಾ.ಜಿ ಪರಮೇಶ್ವರ್

ಬೆಂಗಳೂರು : ‘ಕಾಂಗ್ರೆಸ್ ಪಕ್ಷಕ್ಕೆ ಫಿಕ್ಸ್ ವೋಟರ್ಸ್ ಇದ್ದಾರೆ. ಕಾಂಗ್ರೆಸ್​ಗೆ ದಲಿತರು, ಮುಸ್ಲಿಮರು, ಹಿಂದುಳಿದವರು ಮತದಾರರು ಇದ್ದಾರೆ. ಅದನ್ನು ನಾವು ಮೈಟೆನ್ ಮಾಡ್ತೀವಿ, ಆತಂಕ ಪಡುವ ಅವಶ್ಯಕತೆಯೇ ಇಲ್ಲ’ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ತೀನಿ ಅಂತಿದ್ದಾರೆ. ಯಾಕೆ ಅಂದ್ರೆ ಅವರು ವೀಕ್ ಆಗಿದ್ದಾರೆ. ಅವರು ಸ್ಟ್ರಾಂಗ್ ಆಗಿದ್ದಾಗ ಮೈತ್ರಿ ವಿಚಾರ ಬರಲ್ಲ ಎಂದು ಕುಟುಕಿದರು.

ಬಿಜೆಪಿಯವರು ಕಳೆದ ಬಾರಿ ಮೈತ್ರಿ ಬಗ್ಗೆ ಮಾತನಾಡಿಲ್ಲ. ಅವರೇ ಚುನಾವಣೆಗೆ ಹೋದ್ರು 25 ಕ್ಷೇತ್ರ ಗೆದ್ರು. ಈ ಬಾರಿ ಬಿಜೆಪಿಗೆ ಹೆಚ್ಚು ಕಾನ್ಪಿಡೆನ್ಸ್ ಇಲ್ಲ. ಅದಕ್ಕೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್ಚು ಸೀಟು ಗೆಲ್ಲಬೇಕು ಅಂತ ಹೋಗ್ತಾ ಇದ್ದಾರೆ. ಸೀಟ್ ಶೇರಿಂಗ್ ಆಗಿಲ್ಲ, ಫೈನಲ್ ಆಗಿಲ್ಲ ಘೋಷಣೆ ಮಾಡಲಿ, ಅಲ್ಲಿಯವರೆಗೆ ನಾವು ವಾಚ್ ಮಾಡ್ತೀವಿ ಎಂದು ಹೇಳಿದರು.

ಪೊಲೀಸರು ಅಲರ್ಟ್ ಆಗಲೇಬೇಕು

ಖಾಸಗಿ ಸಾರಿಗೆ ಮಾಲೀಕರು ಬೆಂಗಳೂರು ಬಂದ್ ಮಾಡಬೇಕು ಎಂಬ ಮಾಹಿತಿ ಬಂದ ಮೇಲೆ ಸ್ವಾಭಾವಿಕ ಪೊಲೀಸ್ ಇಲಾಖೆ ಅಲರ್ಟ್ ಆಗಲೇಬೇಕು. ಅಹಿತಕರ ಘಟನೆಗಳು ಯಾವುದು ಆಗಬಾರದು. ಕಾನೂನಿಗೆ ವಿರುದ್ಧ ಸಾರ್ವಜನಿಕ ಆಸ್ತಿ, ಸರ್ಕಾರಿ ಆಸ್ತಿಗಳಿಗೆ ಕ್ರಮ ತೆಗೆದುಕೊಳ್ಳುವುದು ಸ್ವಾಭಾವಿಕ ಮಾಡಲಾಗುತ್ತೆ ಎಂದು ತಿಳಿಸಿದರು.

ಎಲ್ಲಿಯೂ ದೊಡ್ಡ ಗಲಾಟೆ ಆಗಿಲ್ಲ

ನಿನ್ನೆ, ಇವತ್ತು ಎಲ್ಲರಿಗೂ ಕ್ರಮ ತೆಗೆದುಕೊಳ್ಳಬೇಕು ಎಂಬ ಸೂಚನೆ ಕೊಟ್ಟಿದ್ದೆ. ಇಲಾಖೆ ಅವರು ಎಸ್​ಪಿಗಳು ಅಲರ್ಟ್ ಆಗಿದ್ದಾರೆ, ಕ್ರಮ ತೆಗೆದುಕೊಂಡಿದ್ದಾರೆ. ಎಲ್ಲಿಯೂ ದೊಡ್ಡ ಗಲಾಟೆ ಆಗಿಲ್ಲ. ಒಂದೆರಡು ಕಡೆ ಸಣ್ಣ ಪುಟ್ಟ ಬಂದ್ ಮಾಡುವ ಬಿಡುವ ವಿಚಾರದಲ್ಲಿ ಗಲಾಟೆಗಳಾಗಿವೆ. ಅವರಲ್ಲಿಯೇ ಎರಡು ಗುಂಪುಗಳಾಗಿವೆ ಗಲಾಟೆ ಆಗಿವೆ. ಸಂಜೆಯ ಒಳಗೆ ಏನಾದರೂ ಆದ್ರೆ ತಿಳಿಸುತ್ತೇನೆ ಎಂದು ಹೇಳಿದರು.

ದೊಡ್ಡ ಗಲಾಟೆ ಆದ್ರೆ ತಿಳಿಸ್ತಾರೆ

ನಿರಂತರವಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ದೊಡ್ಡ ಗಲಾಟೆಗಳಾದ ಸಂದರ್ಭದಲ್ಲಿ ನನಗೆ ತಿಳಿಸುತ್ತಾರೆ. ಸಣ್ಣ ಆಸ್ತಿ ನಷ್ಟ ಆಯ್ತು, ಬೆಂಕಿ ಹಚ್ಚಿದ್ರು, ಆಸ್ತಿ ನಷ್ಟ ಮಾಡಿದ್ರು ಅಂತ ಹೇಳುತ್ತಾರೆ. ಪುಟ್ಟ ಗಲಾಟೆ ಆದರೆ ಪೊಲೀಸ್ ಅಧಿಕಾರಿಗಳೇ ಹ್ಯಾಡಲ್ ಮಾಡುತ್ತಾರೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.

Exit mobile version