Site icon PowerTV

ನಾಳೆ ಬೆಂಗಳೂರು ಬಂದ್: ಶಾಲೆಗಳಿಗಿಲ್ಲ ರಜೆ!

ಬೆಂಗಳೂರು: ಖಾಸಗಿ ವಾಹನಗಳು ನಾಳೆ ಬೆಂಗಳೂರನ್ನ ಬಂದ್ ಮಾಡುತ್ತಿರುವ ಹಿನ್ನೆಲೆ, ಯಾವುದೇ ಶಾಲೆಗೆ ರಜೆ ಇರೋದಿಲ್ಲ ಎಂದು ಕ್ಯಾಮ್ಸ್ ಅಧ್ಯಕ್ಷ ಶಶಿಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಲಾ ವಾಹನ ಚಾಲಕರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ನಾಳೆ ಯಾವುದೇ ಶಾಲಾ ವಾಹನಗಳು ಓಡಾಡುವುದಿಲ್ಲ. ಆದ್ದರಿಂದ ಪೋಷಕರೇ ಮಕ್ಕಳನ್ನ ಶಾಲೆಗೆ ಕರೆತಂದು ಬಿಡಬೇಕು.

ಇದನ್ನೂ ಓದಿ: ಪೊಲೀಸರನ್ನು ಕಂಡು ದಿಕ್ಕಾಪಾಲಾಗಿ ಓಡಿದ ವಿದೇಶಿ ಮಹಿಳೆಯರು!

ಖಾಸಗಿ ವಾಹನಗಳ ಮೇಲೆ ಅವಲಂಬನೆಯಾಗಿರೋ ಶಾಲಾ ಮಕ್ಕಳಿಗೆ ಸಮಸ್ಯೆಯಾಗಲಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ತಂದು ಶಾಲೆಗೆ ಬಿಡುವುದು ಅವರ ಜವಾಬ್ದಾರಿ ಎಂದು ತಿಳಿಸಿದರು.

Exit mobile version