Site icon PowerTV

ಟೀಮ್ ಭಾರತ ಮರು ನಾಮಕರಣಕ್ಕೆ ಕ್ರೀಡಾಭಿಮಾನಿಗಳ ಒತ್ತಾಯ

ಮೈಸೂರು : ಭಾರತ ಮತ್ತು ಪಾಕಿಸ್ತಾನ ಹೈ ವೋಲ್ಟೇಜ್ ಕ್ರಿಕೆಟ್ ಮ್ಯಾಚ್​ ಹಿನ್ನೆಲೆ ಇಂಡಿಯನ್ ಟೀಮ್ ಹೆಸರು ಬದಲಿಸಲು ಒತ್ತಾಯಿಸುತ್ತಿರುವ ಕ್ರೀಡಾಭಿಮಾನಿಗಳು.

ಇಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಹೈ ವೋಲ್ಟೇಜ್ ಕ್ರೀಕೆಟ್ ಮ್ಯಾಚ್ ನಡೆಯುತ್ತಿರುವ ಹಿನ್ನೆಲೆ ಆಲ್ ದಿ ಬೆಸ್ಟ್ ಟೀಮ್ ಇಂಡಿಯಾ ಬದಲಾಗಿ ಆಲ್ ದಿ ಬೆಸ್ಟ್ ಟೀಮ್ ಭಾರತ್ ಎಂದು ನಾಮಕರಣ ಮಾಡಿ ಎಂದು ಮೈಸೂರಿನ ಕ್ರಿಕೆಟ್ ಅಭಿಮಾನಿಗಳು ಘೋಷಣೆಯನ್ನು ಕೂಗಿದ್ದಾರೆ.

ಈ ಮೂಲಕ ಇಂಡಿಯಾ ಬದಲಾಗಿ ಭಾರತ್ ಹೆಸರು ಮರು ನಾಮಕರಣಕ್ಕೆ ಬೆಂಬಲವನ್ನು ನೀಡುತ್ತ, ರಾಷ್ಟ್ರಧ್ವಜವನ್ನು ಹಿಡಿದು ಭಾರತ ತಂಡಕ್ಕೆ ಶುಭಕೋರಿದ ಕ್ರಿಕೆಟ್ ಅಭಿಮಾನಿಗಳು.

ಇದನ್ನು ಓದಿ : ಬೈಕ್, ಬಸ್ ನಡುವೆ ಮುಖಾಮುಖಿ ಡಿಕ್ಕಿ; ದಂಪತಿ ಸಾವು

ಅಷ್ಟೇ ಅಲ್ಲದೆ ಮೈಸೂರಿನ 101 ಗಣಪತಿ ದೇವಾಲಯದಲ್ಲಿ ಭಾರತದ ಗೆಲುವಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ಟೀಮ್ ಭಾರತ್ ಮರು ನಾಮಕರಣಕ್ಕೆ ಕ್ರೀಡಾಭಿಮಾನಿಗಳು ಒತ್ತಾಯಿಸಿದ್ದಾರೆ.

Exit mobile version