Site icon PowerTV

ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ಗಲಾಟೆ ; ಇಬ್ಬರು ಗಂಭೀರ ಗಾಯ

ಯಾದಗಿರಿ : ಕ್ಷುಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ಹಿನ್ನೆಲೆ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಘಟನೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ.

ಸದಾಶಿವ ಹಾಗೂ ಬಸವರಾಜ್ ಎಂಬುವವರು ಎತ್ತಿನ ಗಾಡಿಯಲ್ಲಿ ಜಮೀನಿಗೆ ತೆರಳಿದ್ದರು. ಈ ವೇಳೆ ಜಮೀನಿಗೆ ಕುರಿ ಬೇಲಿ ಹಾಕಿದ್ದರಿಂದ, ಅದನ್ನು ಕಂಡು ಬೆದರಿದ್ದ ಎತ್ತುಗಳು. ಈ ಹಿನ್ನೆಲೆ ದಾರಿಯಲ್ಲಿ ಬೇಲಿ ಏಕೆ ಹಾಕಿದ್ದೀರಿ? ಅಂತ ಪ್ರಶ್ನೆ ಮಾಡಿದ್ದ ಯುವಕರು.

ಯುವಕರು ಪ್ರಶ್ನೆ ಮಾಡಿದ್ದ ಕಾರಣ ಕೋಪಗೊಂಡಿದ್ದು, ಮೈಲಾರಿ, ಮುದಕಪ್ಪ, ಯಲ್ಲಪ್ಪ ಸೇರಿದಂತೆ ಒಂಬತ್ತು ಜನರು ಚಕ್ಕಡಿಯಲ್ಲಿ ತೆರಳ್ತಿದ್ದ, ಸದಾಶಿವ ಮತ್ತು ಬಸವರಾಜ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಇದನ್ನು ಓದಿ : ಹುಚ್ಚು ನಾಯಿ ದಾಳಿ; 13 ಮಂದಿಗೆ ಗಂಭೀರ ಗಾಯ

ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version