Site icon PowerTV

ಪಾಕ್​ಗಿಂತಲೂ ಭಾರತದಲ್ಲೇ ದೇಶದ್ರೋಹಿಗಳು ಹೆಚ್ಚು : ಶಾಸಕ ಯತ್ನಾಳ್

ಕೊಪ್ಪಳ : ಪಾಕಿಸ್ತಾನಕ್ಕಿಂತಲೂ ಹೆಚ್ಚು ದೇಶದ್ರೋಹಿಗಳು ಭಾರತದಲ್ಲಿ ಇದ್ದಾರೆ. ಸೋನಿಯಾ ಗಾಂಧಿ, ಲಾಲು ಪ್ರಸಾದ್, ಅಖಿಲೇಶ ಯಾದವ್, ಮಮತಾ ಬ್ಯಾನರ್ಜಿ ದೇಶ ಲೂಟಿ ಹೊಡೆದಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದರು.

ಕೊಪ್ಪಳದಲ್ಲಿ ಮಾತನಾಡಿದ ಅವರು, ಭಾರತ್ ಜೋಡೊ ಎಂದೂ ನೀವು ಹೆಸರು ಇಟ್ಟಿದ್ದೀರಿ. ಭಾರತ ಇಬ್ಬಾಗ ಮಾಡಲು ಒಪ್ಪುವುದಿಲ್ಲ. ಬ್ರಾತೃತ್ವ, ಸಹಬಾಳ್ವೆ ಮಾಡೋಣ. ಸುರಕ್ಷಿತ ಭಾರತವಾಗಿ ಇರುವುದೇ ನಮ್ಮ ದೊಡ್ಡ ಗ್ಯಾರಂಟಿ ಎಂದು ಹೇಳಿದರು.

ಜಮ್ಮು ಕಾಶ್ಮೀರದ 370ನೇ ವಿಧಿ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ವಾತಾವರಣವಿತ್ತು. ಅಂತಹ ಕರಾಳ ಶಾಸನವನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದು ಹಾಕಿದರು. ಒಬ್ಬ ಸೈನಿಕನ ಹತ್ತು ಜನರನ್ನು ಹೊಡೆದಾಕುವ ಅಧಿಕಾರ ದೇಶದ ಸೈನಿಕರಿಗೆ ಮೋದಿಯವರು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಭಾರತ ವಿಶ್ವ ಗುರುವಾಗಲು ಸಾಧ್ಯ

ಒಂಭತ್ತು ವರ್ಷದಲ್ಲಿ ತಪಸ್ಸಿನ ಫಲ ಜಿ-20 ಸಭೆ ನಡೆಯುತ್ತಿದೆ. ದೇಶದ ಏಕತೆಗೆ ದೆಹಲಿಗೆ ಮಣ್ಣು ಕಳುಹಿಸುತ್ತಿರುವುದು ಶ್ಲಾಘನೀಯ. ಭಾರತ ವಿಶ್ವ ಗುರುವಾಗಲು ಸಾಧ್ಯವಾಗಿದೆ. ದೇಶದ ಏಕತೆಗಾಗಿ ಮಣ್ಣು ಸಂಗ್ರಹಿಸಿ ದೆಹಲಿಗೆ ಕಳಿಸುತ್ತಿರುವುದು ದೇಶದ ಏಕತೆಯ ಸಂಕೇತ. ಭಾರತ ಜಗನ್ಮಾತೆಯಾಗಬೇಕು. ಆರ್ಥಿಕತೆಯಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸುವಲ್ಲಿ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version