Site icon PowerTV

ರಸ್ತೆಯಲ್ಲೆ ಹೊತ್ತಿ ಉರಿದ ಡಸ್ಟರ್ ಕಾರು

ಹಾಸನ : ಚಲಿಸುತ್ತಿದ್ದ ಕಾರವೊಂದರಲ್ಲಿ ಏಕಾಏಕಿ ಬೆಂಕಿ ಹೊತ್ತಿ ಉರಿದಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಪ್ಲೈ ಒವರ್ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಂಗಳೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದ ಡಸ್ಟರ್ ಕಾರವೊಂದರಲ್ಲಿ ದಂಪತಿಗಳು ಹಾಗೂ ಒಬ್ಬ ಡ್ರೈವರ್ ಪ್ರಯಾಣಿಸುತ್ತಿದ್ದರು. ಈ ವೇಳೆ ಮೊದಲಿಗೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ದಂಪತಿಗಳನ್ನು ಚಾಲಕ ಕಾರಿನಿಂದ ಕೆಳಗೆ ಇಳಿಸಿದ್ದನು.

ಇದನ್ನು ಓದಿ : ಟೀಮ್ ಭಾರತ ಮರು ನಾಮಕರಣಕ್ಕೆ ಕ್ರೀಡಾಭಿಮಾನಿಗಳ ಒತ್ತಾಯ

ಬಳಿಕ ಚಾಲಕ ಕೂಡ ಕೆಳಗೆ ಇಳಿದು ಏನಾಯಿತು ಎಂದು ನೋಡಲು ಮುಂದಾದಗ ಕಾರು ಏಕಾಏಕಿ ಬೆಂಕಿ ಹತ್ತಿ ದಂಪತಿಗಳ ಕಣ್ಣೆದುರೇ ಧಗಧಗನೇ ಹೊತ್ತಿ ಉರಿದಿದೆ. ಸದ್ಯ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಕಾರು ಹೊತ್ತಿ ಉರಿಯುತ್ತಿರುವ ವೇಳೆ ಅಲ್ಲೆ ನಿಂತಿದ್ದ ಸ್ಥಳೀಯರ ಮೊಬೈಲ್​ನಲ್ಲಿ ದೃಶ್ಯ ಸೆರೆಯಾಗಿದೆ.

Exit mobile version