ವಿಜಯಪುರ : ಹರಿಪ್ರಸಾದ್ ಹೇಳಿದ ಆ ‘ಮಜಾವಾದಿ’ ಯಾರು? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಬಿ.ಕೆ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಗ್ಗೆ ಟ್ವಿಟ್ ಮಾಡಿರುವ ಅವರು, ಆ ಮಜಾವಾದಿಯ ಹೆಸರು ಹೇಳುವ ಧೈರ್ಯ ಹರಿಪ್ರಸಾದ್ ಅವರಿಗೆ ಇಲ್ಲವೇ? ಅಷ್ಟು ಭಯಾನಾ? ಎಂದು ಪ್ರಶ್ನಿಸಿದ್ದಾರೆ.
ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಅಂತ ಹೇಳಿದರೆ ಆಗೋದಿಲ್ಲ. ಅವರು ಸಮಾಜವಾದಿ ಅಲ್ಲ, ಮಜಾವಾದಿ ಅಂತ ಹರಿಪ್ರಸಾದ್ ಹೇಳಿದ್ದಾರೆ? ಹಾಗಿದ್ರೆ, ಆ ಮಜಾವಾದಿ ಯಾರು ಅಂತ ಬಹಿರಂಗಪಡಿಸಿ ಎಂದು ಯತ್ನಾಳ್ ಕೆದಕಿದ್ದಾರೆ.
ಹರಿಪ್ರಸಾದ್ ಹೇಳಿದ್ದೇನು?
ಮಂತ್ರಿ ಸ್ಥಾನ ವಂಚಿತ ಬಿ.ಕೆ ಹರಿಪ್ರಸಾದ್ ಅವರು, ಬೆಂಗಳೂರಿನಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಭೆಯ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿದ್ದಾರೆ. ಈವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ವೇದಿಕೆ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
‘ನಾನು ಸರ್ಕಾರ ಮಾಡಿದ್ದೇನೆ, ಹೇಗೆ ಬೇಕಾದರೂ ತೀರ್ಮಾನ ಮಾಡ್ತೀನಿ ಅಂದ್ರೆ ಜನರೂ ಕೂಡ ತೀರ್ಮಾನ ಮಾಡ್ತಾರೆ. ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಅಂತ ಹೇಳಿದರೆ ಆಗೋದಿಲ್ಲ. ಅವರು ಸಮಾಜವಾದಿ ಅಲ್ಲ, ಮಜಾವಾದಿ’ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಹೂಬ್ಲೋಟ್ ವಾಚ್ ಧರಿಸಿ ಬಿಳಿ ಪಂಚೆ ಉಟ್ಟುಕೊಡಿರುವವರೆಲ್ಲಾ ಸಮಾಜವಾದಿಗಳಲ್ಲ, ಮಜಾವಾದಿಗಳು. ಕಾಂಗ್ರೆಸ್ ಹರಿಪ್ರಸಾದ್.
ಹರಿಪ್ರಸಾದ್ ಹೇಳಿದ ಆ "ಮಜಾವಾದಿ" ಯಾರು?
ಆ ಮಜಾವಾದಿಯ ಹೆಸರು ಹೇಳುವ ಧೈರ್ಯ…
— Basanagouda R Patil (Yatnal) (@BasanagoudaBJP) September 9, 2023


