ಬೆಂಗಳೂರು : ಕನ್ನಡದ ಮಾತು ಚಂದ.. ಕನ್ನಡದ ಕಮಾಂಡ್ಗಳು ಇನ್ನೂ ಚಂದ.. ಕನ್ನಡದಲ್ಲೇ ಕವಾಯತು ಆದೇಶ ಇದ್ರೆ ಎಷ್ಟು ಚಂದ ಅಲ್ವಾ?
ಇನ್ಮುಂದೆ ರಾಜ್ಯದಲ್ಲಿ ಕನ್ನಡದಲ್ಲೇ ಕವಾಯತು ಆದೇಶಗಳು ಇರಲಿದೆ. ರಾಜ್ಯದ ಆಡಳಿತದಲ್ಲಿ ಕನ್ನಡಕ್ಕೆ ಮಹತ್ವ-ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಗಳು ಜಾರಿಯಾಗಿದೆ.
ಈ ಸಲುವಾಗಿ ರಾಜ್ಯದ ಪೊಲೀಸರು ಮಹತ್ವದ ಕ್ರಮಕೈಗೊಂಡಿದ್ದು, ಗೃಹಸಚಿವರಿಂದ ಆದೇಶ ಕೂಡ ಹೊರಡಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 2021ರಲ್ಲಿ ಕನ್ನಡದಲ್ಲಿ ಕವಾಯತು ಆದೇಶ ಜಾರಿಗೆ ತರಲಾಗಿತ್ತು.
ಆಂಗ್ಲ ಭಾಷೆಯಲ್ಲಿದ್ದ ಕವಾಯತು ಆದೇಶಗಳನ್ನು ಈಗಿನ ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಅಂದು ಅನುವಾದಿಸಿ ಕೊಟ್ಟಿದ್ದರು. ಅದಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಎಲ್ಲೆಡೆಯೂ ಕನ್ನಡದಲ್ಲೇ ಕವಾಯತು ಆದೇಶ ಪಾಲಿಸುವಂತೆ ಆದೇಶ ಹೊರಡಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? : ಶವಯಾತ್ರೆಗೆ ಹೆಗಲು ಕೊಟ್ಟ ಇನ್ಸ್ಪೆಕ್ಟರ್ ಶಬ್ಬೀರ್
ಕನ್ನಡದ ಕಮಾಂಡ್ಗಳ ಕಂಪು
ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಸಂತಸ ಹಂಚಿಕೊಂಡಿದ್ದಾರೆ. ಕನ್ನಡದ ಕಮಾಂಡ್ಗಳ ಕಂಪು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 2016ರಲ್ಲಿ ಪ್ರಾಯೋಗಿಕವಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರಾರಂಭವಾದ ಈ ಪ್ರಯತ್ನ 2021ರ ರಾಜ್ಯ ಸರ್ಕಾರದ ಆದೇಶದಂತೆ ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಇದರ ಸಂಪೂರ್ಣ ಶ್ರೇಯಸ್ಸು ಈಗಿನ ಕೇಂದ್ರ ವಲಯದ ಐಜಿಪಿರವರಾದ ರವಿಕಾಂತೆ ಗೌಡ ಐಪಿಎಸ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಕನ್ನಡದ ಕಮಾಂಡ್ ಗಳ ಕಂಪು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ೨೦೧೬ ರಲ್ಲಿ ಪ್ರಾಯೋಗಿಕವಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರಾರಂಭವಾದ ಈ ಪ್ರಯತ್ನ ೨೦೨೧ ರ ರಾಜ್ಯ ಸರಕಾರದ ಆದೇಶದಂತೆ ರಾಜ್ಯದಾದ್ಯಂತ ಜಾರಿಗೆ ಬಂದಿದೆ. ಇದರ ಸಂಪೂರ್ಣ ಶ್ರೇಯಸ್ಸು ಈಗಿನ ಕೇಂದ್ರ ವಲಯದ ಐಜಿಪಿರವರಾದ ಶ್ರೀ ರವಿಕಾಂತೆ ಗೌಡ ಐಪಿಎಸ್ ರವರಿಗೆ ಸಲ್ಲುತ್ತದೆ. https://t.co/KpWLg6Mxbk pic.twitter.com/y2YPLLNOdo
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) September 9, 2023


